×
Ad

ಹಾವೇರಿ: ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷರಾಗಿ ಶಹ್ತಾಜ್ ಬೀ ಆಯ್ಕೆ

Update: 2026-02-14 12:34 IST

ಹಾವೇರಿ :  ಎಡಿಪಿಐ ಪಕ್ಷದ ಮಹಿಳಾ ಘಟಕವಾದ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಜಿಲ್ಲಾ ಪ್ರತಿನಿಧಿ ಸಭೆಯು ರಾಣೆಬೆನ್ನೂರಿನ ಖ್ವಾಜಾ ಬಂದಾ ನವಾಜ್ ಹಾಲ್ ನಲ್ಲಿ ನಡೆಯಿತು.

ನೂತನ ಜಿಲ್ಲಾಧ್ಯಕ್ಷೆಯಾಗಿ ಶಹ್ತಾಜ್ ಬೀ, ಜಿಲ್ಲಾ ಉಪಾಧ್ಯಕ್ಷೆಯಾಗಿ ಫಾತಿಮಾ ಗುಬ್ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಆಫಿಯಾ ದಾರೋದಾರ್, ಜಿಲ್ಲಾ ಕಾರ್ಯದರ್ಶಿಗಳಾಗಿ ರೆಹನಾ ಬಾನು ದೊಡ್ಡ ಗುಬ್ಬಿ, ಕೋಶಾಧಿಕಾರಿಯಾಗಿ ರುಕಿಯಾ ರಾಣಿಬೆನ್ನೂರು ಆಯ್ಕೆಯಾದರು.

ಸಮಿತಿ ಸದಸ್ಯರುಗಳಾಗಿ ಸಮೀನಾ ಖಾನಂ, ಶಾಝಿಯಾ ಶೇಕ್ ಸನಾದಿ, ರುಕಿಯಾ ಮಾಸೂರ್ ಹಾಗೂ ಝೋಯಾ ಖತೀಬ್ ರವರು ಆಯ್ಕೆಯಾಗಿದ್ದಾರೆ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲಾಧ್ಯಕ್ಷ ಜಿಲಾನಿ, ಜಿಲ್ಲಾ ಉಪಾಧ್ಯಕ್ಷ ಖಾಸಿಂ ಗಬ್ಬಾನಿ ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯನ್ನು ನಡೆಸಿಕೊಡಲು ವಿಮೆನ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಹಾಗೂ ರಾಜ್ಯ ಸಮಿತಿ ಸದಸ್ಯರಾದ ನಾಜಿಯ ಕಾಪು ರವರು ಆಗಮಿಸಿದ್ದರು.

 ನೂತನವಾಗಿ ಆಯ್ಕೆಯಾದ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News