×
Ad

ಮರುಕಳಿಸುವ ಮೂಳೆ ನೋವು; ಯಾವಾಗ ಪರೀಕ್ಷಿಸಿಕೊಳ್ಳುವ ಅಗತ್ಯವಿದೆ?

Update: 2026-07-06 19:02 IST

ಸಾಂದರ್ಭಿಕ ಚಿತ್ರ | Photo Credit : magnific.com

ನೋವು ಮುಂದುವರಿದರೆ, ಉಲ್ಬಣಗೊಂಡರೆ, ಪದೇಪದೆ ಕಂಡುಬಂದರೆ ಅಥವಾ ಊತದೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ನಿರ್ಲಕ್ಷಿಸಬಾರದು.

ಮೂಳೆ ನೋವು ಸಾಮಾನ್ಯವಾಗಿ ಎಲ್ಲರಿಗೂ ಕಂಡುಬರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದ ಕಾರಣ ಗಾಯ, ವಯಸ್ಸಾದಾಗ ಬರುವ ಗಾಯ, ವಿಟಮಿನ್ ಕೊರತೆ, ಸಂಧಿವಾತ ಅಥವಾ ಅತಿಯಾದ ನಡಿಗೆಯಿಂದ ಬಂದ ನೋವು ಎಂದು ನಿರ್ಲಕ್ಷಿಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಗಾಯವು ದೈನಂದಿನ ಸಮಸ್ಯೆಯಾಗಿರಬಹುದು ಮತ್ತು ಚಿಕಿತ್ಸೆ ನೀಡಬಹುದಾಗಿರಬಹುದು. ಹೀಗಾಗಿ ನೋವು ಮುಂದುವರಿದರೆ, ಉಲ್ಬಣಗೊಂಡರೆ, ಪದೇಪದೆ ಕಂಡುಬಂದರೆ ಅಥವಾ ಊತದೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ನಿರ್ಲಕ್ಷಿಸಬಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೊಸದಿಲ್ಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಆರ್ತೊಪೆಡಿಕ್ ಆಂಕೊಲಾಜಿ ವಿಭಾಗದ ಸಲಹೆಗಾರರಾದ ಡಾ. ಹಿಮಾಂಶು ರೋಹೆಲಾ ಅವರ ಪ್ರಕಾರ, ನಿರಂತರ ಮೂಳೆ ನೋವು ಗಂಭೀರ ಸಮಸ್ಯೆಯ ಸಂಕೇತವಾಗಿರಬಹುದು. ಮೂಳೆ ಸರ್ಕೊಮ ಅಥವಾ ಮೂಳೆ ಕ್ಯಾನ್ಸರ್ ಬರುವುದು ಗೊತ್ತೇ ಆಗುವುದಿಲ್ಲ. ಏಕೆಂದರೆ ಈ ಮೂಳೆ ಗೆಡ್ಡೆಗಳು ಸಾಮಾನ್ಯವಾಗಿ ರೋಗ ಚಿಹ್ನೆಗಳನ್ನು ಪ್ರದರ್ಶಿಸುವುದಿಲ್ಲ.

ಅವರ ಪ್ರಕಾರ, ನೋವು ಸೌಮ್ಯವಾಗಿ ಆರಂಭವಾಗಬಹುದು. ಉಳುಕು ಅಥವಾ ಒತ್ತಡ ಎಂದು ತಪ್ಪಾಗಿ ಗ್ರಹಿಸಬಹುದು. ಆರಂಭದಲ್ಲಿ ಬಂದು ಹೋಗಬಹುದು. ಆದರೆ ಕಾಲಾನಂತರ ಹೆಚ್ಚು ಸ್ಥಿರವಾಗಬಹುದು. ನಡಿಗೆ, ನಿದ್ರೆ, ದೈನಂದಿನ ಚಲನೆ ಅಥವಾ ಸಾಮಾನ್ಯ ಚುಟವಟಿಕೆಗೆ ಅಡ್ಡಿಯಾಗಬಹುದು!

ಮೂಳೆ ನೋವಿಗೆ ವೈದ್ಯಕೀಯ ಚಿಕಿತ್ಸೆಯೇಕೆ ಬೇಕು?

ಡಾ. ಹಿಮಾಂಶು ರೋಹೆಲಾ ಅವರು ಹೇಳುವ ಪ್ರಕಾರ ಸುಧಾರಣೆಯಾಗದೆ ಕೆಲವು ವಾರಗಳವರೆಗೆ ಮೂಳೆ ನೋವು ಮುಂದುವರಿದರೆ ವೈದ್ಯರನ್ನು ಕಾಣಬೇಕು.

►  ರಾತ್ರಿ ಸಮಯದಲ್ಲಿ ಅಥವಾ ವಿಶ್ರಾಂತಿ ಸಮಯದಲ್ಲಿ ನೋವು

►  ಒಂದೇ ಸ್ಥಳದಲ್ಲಿ ಮರುಕಳಿಸುವ ನೋವು

►  ಊತ, ಮೃದುವಾಗಿರುವುದು ಅಥವಾ ಗೆಡ್ಡೆಯಾಗಿರುವುದು

►  ಕುಂಟುವುದು, ನಿರ್ಬಂಧಿತ ಚಲನೆ ಅಥವಾ ಅಂಗವನ್ನು ಬಳಸುವಾಗ ತೊಂದರೆ

►  ಸಣ್ಣ ಗಾಯದ ನಂತರ ಸಂಭವಿಸುತ್ತದೆ. ನಂತರ ಅಸಾಮಾನ್ಯವಾಗಿ ಗಂಭೀರವಾಗುತ್ತದೆ

►  ವಿವರಿಸಲಾಗದ ತೂಕ ನಷ್ಟ, ಆಯಾಸ ಅಥವಾ ಜ್ವರಕ್ಕೆ ಸಂಬಂಧಿಸಿದೆ

►  ಹೆಚ್ಚು ನೋವಿಲ್ಲದೆ ಮೂಳೆ ಮುರಿತವಾಗಿರುತ್ತದೆ.

ಈ ಲಕ್ಷಣಗಳು ಕ್ಯಾನ್ಸರ್ ಆಗಿರಬೇಕು ಎಂದೇನಿಲ್ಲ. ಸೋಂಕು, ಮುರಿತ, ಉರಿಯೂತ, ಸಂಧಿವಾತ, ಆಸ್ಟಿಯೊಪೊರೋಸಿಸ್ ಅಥವಾ ಇತರ ಮೂಳೆಯ ಸಮಸ್ಯೆಗಳಾಗಿರಬಹುದು. ಆದರೆ ಪದೇಪದೆ ನೋವು ಕಾಣಿಸಿಕೊಂಡಲ್ಲಿ ನೋವು ನಿವಾರಕ ಅಥವಾ ಮನೆಮದ್ದುಗಳ ಬದಲಾಗಿ ಅಗತ್ಯವಿರುವ ಚಿಕಿತ್ಸೆಯ ಎಚ್ಚರಿಕೆಯ ಚಿಹ್ನೆಗಳಾಗಿರಬಹುದು.

ಬೋನ್ ಸರ್ಕೋಮ ಅಪರೂಪದ ರೋಗ. ಆದರೆ ರೋಗ ನಿರ್ಣಯದ ವಿಳಂಬದಿಂದಾಗಿ ಚಿಕಿತ್ಸೆ ಹೆಚ್ಚು ಸಂಕೀರ್ಣಗೊಳ್ಳುತ್ತದೆ. “ನೋವು ದಿನನಿತ್ಯದ ಮೂಳೆ ಸಮಸ್ಯೆಯಿಂದ ಉಂಟಾಗಿದೆಯೆ ಅಥವಾ ಹೆಚ್ಚು ಗಂಭೀರವಾಗಿದ್ದೇ ಎಂದು ಗುರುತಿಸಲು ವೈದ್ಯರಿಗೆ ಆರಂಭಿಕ ವೈದ್ಯಕೀಯ ಮೌಲ್ಯಮಾಪನ ನೆರವಾಗುತ್ತದೆ. ಲಕ್ಷಣಗಳು ಮತ್ತು ಸಂಶೋಧನೆಗಳನ್ನು ಅವಲಂಬಿಸಿ ಹೇಳುವುದಾದರೆ ದೈಹಿಕ ಪರೀಕ್ಷೆ, ಎಕ್ಸ್ ರೇಗಳು, ಎಂಆರ್ಐ, ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆ ಅಥವಾ ಬಯಾಪ್ಸಿ ಮಾಡಬೇಕಾಗಿ ಬರಬಹುದು.

ಗೆಡ್ಡೆ ಸಮಸ್ಯೆ ಇದೆ ಎಂದಾದಲ್ಲಿ ಆಂಕೋಲಜಿ ವಿಭಾಗದಲ್ಲಿ ಪರೀಕ್ಷಿಸಿಕೊಳ್ಳಲೇಬೇಕು. ನೋವು ಎಂದರೆ ದೇಹದ ಆ ಭಾಗಕ್ಕೆ ಗಮನ ಕೊಡಬೇಕು ಎಂದು ಸೂಚಿಸುವ ದೇಹದ ಗುಣವಾಗಿರುತ್ತದೆ. ಹೀಗಾಗಿ ವ್ಯಾಯಾಮದ ನಂತರ ಸಾಂದರ್ಭಿಕ ನೋವುಗಳು ವಿಶ್ರಾಂತಿ ಮತ್ತು ಚಿಕಿತ್ಸೆಯಿಂದ ಕಡಿಮೆಯಾಗಬಹುದು. ಆದರೆ ನಿರಂತರ ನೋವು, ವಿವರಿಸಲಾಗದೆ ನೋವು ಹದಗೆಡುತ್ತಿದ್ದರೆ, ನಿದ್ರೆಗೆ ತೊಂದರೆ ನೀಡುತ್ತಿದ್ದರೆ ಅಥವಾ ಊತ, ಚಲನೆಯಲ್ಲಿ ತೊಂದರೆ ಇದ್ದರೆ ಪರೀಕ್ಷಿಸಿಕೊಳ್ಳುವುದು ಉತ್ತಮ. ಸಕಾಲಿಕ ರೋಗ ನಿರ್ಣಯದಿಂದ ಚಿಕಿತ್ಸೆ ಸರಳವಾಗುತ್ತದೆ.

ಸೂಚನೆ: ಈ ಲೇಖನವನ್ನು ಮಾಹಿತಿಯ ಉದ್ದೇಶಗಳಿಗಾಗಿ ಮಾಧ್ಯಮಗಳಿಂದ ಪಡೆದ ಮಾಹಿತಿಯಿಂದ ನೀಡಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸಮಸ್ಯೆ ಇದ್ದರೆ ಯಾವದುಏ ಪ್ರಶ್ನೆಗಳಿಗೆ ನಿಮ್ಮ ವಿಶ್ವಾಸಾರ್ಹ ವೈದ್ಯರ ಸಲಹೆ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News