ಮೊಡವೆ ಓಡಿಸಲು ಈ 7 ತಂತ್ರಗಳನ್ನು ಬಳಸಿ...
ಸಾಂದರ್ಭಿಕ ಚಿತ್ರ | Photo Credit : magnific.com
ಚರ್ಮತಜ್ಞರಾಗಿರುವ ಡಾ. ಪೂರ್ವ ಪಾಂಡೆ ಮೊಡವೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದಾದ ಪ್ರಾಯೋಗಿಕ ಮಾರ್ಗದ ವಿವರ ನೀಡಿದ್ದಾರೆ.
ಮೊಡವೆಗಳು ಬಂದಾಗ ಬಹಳ ಹತಾಶೆಯ ಅನುಭವವಾಗುತ್ತದೆ. ಮುಖ್ಯವಾಗಿ ದುಬಾರಿ ಸೀರಮ್ ಮತ್ತು ಮಾಯಿಶ್ಚರೈಸರ್ ಬಳಸುತ್ತಿದ್ದರೂ ಮೊಡವೆ ಹೋಗುವುದಿಲ್ಲ. ಅಂತಹ ಸಂದರ್ಭದಲ್ಲಿ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮತ್ತು ಮೊಡವೆ ರಚನೆಯ ಮೂಲ ಕಾರಣಗಳನ್ನು ಗುರಿಯಾಗಿಸುವ ಸ್ಥಿರ ಮತ್ತು ಸಮತೋಲಿತ ದಿನಚರಿಯ ಅಗತ್ಯವಿದೆ. ಪಂಚಕುಲದ ಡಾ ಪೂರ್ವಾಸ್ ಸ್ಕಿನ್ ಕ್ಲಿನಿಕ್ ನ ನಿರ್ದೇಶಕಿ ಮತ್ತು ಚರ್ಮತಜ್ಞರಾಗಿರುವ ಡಾ. ಪೂರ್ವ ಪಾಂಡೆ ಮೊಡವೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಬಹುದಾದ ಪ್ರಾಯೋಗಿಕ ಮಾರ್ಗದ ವಿವರ ನೀಡಿದ್ದಾರೆ.
ಸೌಮ್ಯವಾದ ಮತ್ತು ಪಿಎಚ್-ಸಮತೋಲಿತ ಕ್ಲೆನ್ಸರ್ ಅಗತ್ಯ:
ಸೂಕ್ಷ್ಮ ಚರ್ಮಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಅನೇಕ ಫೇಸ್ವಾಶ್ ಗಳು ಕಠಿಣ ರಾಸಾಯನಿಕಗಳನ್ನು ಅವಲಂಬಿಸಿವೆ. ಇದು ಚರ್ಮದ ನೈಸರ್ಗಿಕ ಪಿಎಚ್ ಸಮತೋಲನವನ್ನು ಅಡ್ಡಿಪಡಿಸುವ ಕಾರಣದಿಂದ ಚರ್ಮ ಬ್ಯಾಕ್ಟೀರಿಯದ ಸೋಂಕುಗಳಿಗೆ ಒಳಗಾಗುತ್ತದೆ. ನೈಸರ್ಗಿಕ ಹೊಳಪು ಕಾಪಾಡಲು ಬಾಹ್ಯ ಮಾಲಿನ್ಯ ತೆಗೆಯಲು ಸಹಾಯ ಮಾಡುವ ಸೌಮ್ಯ ಕ್ಲೆನ್ಸರ್ ಬಳಸಬೇಕು.
ಒಂದೇ ಉದ್ದೇಶಿತ ಸಕ್ರಿಯ ಅಂಶವಿರಲಿ:
ಮೊಡವೆಗೆ ಅನೇಕ ಸಕ್ರಿಯ ಅಂಶಗಳನ್ನು ಬಳಸುವುದು ಎಲ್ಲರೂ ಮಾಡುವ ಸಾಮಾನ್ಯ ತಪ್ಪಾಗಿರುತ್ತದೆ. ರೆಟಿನಾಲ್ಗಳನ್ನು ವಿಟಮಿನ್ ಸೀರಮ್ ಮತ್ತು ಎಕ್ಸ್ಫಾಲಿಯೇಟಿಂಗ್ ಆಮ್ಲಗಳ ಜೊತೆಗೆ ಸಂಯೋಜಿಸಬಾರದು. ಮುಚ್ಚಿದ ರಂಧ್ರಗಳನ್ನು ತೆರೆಯಲು ಮತ್ತು ಬ್ಯಾಕ್ಟೀರಿಯವನ್ನು ಗುರಿ ಮಾಡಲು ಒಂದು ಉತ್ಪನ್ನ ಬಳಸಬೇಕು. ಚರ್ಮ ಗುಣವಾಗುವುದು ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವಂತಹ ವಸ್ತುವನ್ನು ಆರಿಸಿಕೊಳ್ಳಬೇಕಾಗುತ್ತದೆ.
ಎಣ್ಣೆಯುಕ್ತ ಚರ್ಮಕ್ಕೆ ಮಾಯಿಶ್ಚರೈಸರ್ ಬೇಕು:
ಎಣ್ಣೆಯುಕ್ತ ಚರ್ಮಕ್ಕೆ ಮಾಯಿಶ್ಚರೈಸರ್ ಅಗತ್ಯವಿಲ್ಲ ಎನ್ನುವುದು ತಪ್ಪು ಕಲ್ಪನೆ. ಹೈಡ್ರೇಶನ್ ಕೊರತೆಯಿಂದ ಹೆಚ್ಚು ಮೊಡವೆಗಳು ಬರಬಹುದು. ಚರ್ಮವು ಡಿಹೈಡ್ರೇಶನ್ ಆದಾಗ ಚರ್ಮ ಒಡೆದು ಹೋಗುತ್ತದೆ. ನಿಮ್ಮ ನಿಯಮಿತ ಫೇಸ್ ಕ್ರೀಮ್ ಅನ್ನು ಹೈಲುರಾನಿಕ್ ಆಮ್ಲ ಮತ್ತು ಸೆರಾಮೈಡ್ ಗಳಂತಹ ಅಂಶಗಳು ಇರುವ ಹಗುರವಾದ ಜೆಲ್ ಮಾಯಿಶ್ಚರೈಸರ್ನಿಂದ ಬದಲಾಯಿಸಬೇಕು. ಚರ್ಮ ಚೆನ್ನಾಗಿ ಹೈಡ್ರೇಟ್ ಆದಾಗ ಸತ್ತ ಜೀವಕೋಶಗಳನ್ನು ಚೆನ್ನಾಗಿ ಹೊರ ಹಾಕುತ್ತದೆ. ರಂಧ್ರಗಳನ್ನು ತೆರವುಗೊಳಿಸುತ್ತದೆ.
ಸಕ್ರಿಯ ಗಾಯಗಳಿಗೆ ಹೈಡ್ರೊಕೊಲಾಯ್ಡ್ ಬಳಸುವುದು:
ಅನೇಕ ಮಂದಿ ಮೊಡವೆ ಹಿಂಡಲು ಮುಂದಾಗುತ್ತಾರೆ. ಹೀಗಾಗಿ ಆಳವಾದ ಗಾಯವಾಗಿಬಿಡುತ್ತದೆ. ಅಂತಹ ಗಾಯಗಳಿಗೆ ಹೈಡ್ರೊಕೊಲಾಯ್ಡ್ ಪ್ಯಾಚ್ಗಳನ್ನು ಬಳಸಬಹುದು. ಈ ಸಣ್ಣ ಸ್ಟಿಕ್ಕರ್ಗಳು ಹೆಚ್ಚುವರಿ ದ್ರವ ಹೀರಿಕೊಳ್ಳುತ್ತದೆ ಮತ್ತು ಹೊರಗಿನ ಬ್ಯಾಕ್ಟೀರಿಯಗಳ ಪ್ರವೇಶ ತಡೆಯುತ್ತದೆ.
ಬಾಹ್ಯ ಬ್ಯಾಕ್ಟೀರಿಯ ನಿಯಂತ್ರಣ:
ಫೋನ್, ಮೇಕಪ್ ಬ್ರಷ್ಗಳು ಮತ್ತು ಹಾಸಿಗೆಯಂತಹ ವಸ್ತುಗಳು ಎಣ್ಣೆ, ಬೆವರು ಮತ್ತು ಬ್ಯಾಕ್ಟೀರಿಯಗಳಿಗೆ ಅಯಸ್ಕಾಂತಗಳು. ಹೀಗಾಗಿ ಪ್ರತಿ ಕೆಲ ದಿನಗಳಲ್ಲಿ ದಿಂಬಿನ ಹೊದಿಕೆ ಬದಲಿಸುವುದು ಮತ್ತು ಫೋನ್ ಪರದೆ ಒರೆಸುವುದು ಮೊದಲಾದ ಅಭ್ಯಾಸ ಮಾಡಿಕೊಳ್ಳಬೇಕು.
ಕಾಮೆಡೋಜೆನಿಕ್ ಅಲ್ಲದ ಖನಿಜ ಸನ್ ಸ್ಕ್ರೀನ್ ಆರಿಸಿ:
ಸನ್ಸ್ಕ್ರೀನ್ ಬಳಸಲೇಬೇಕು. ಬೇಸಗೆಯಲ್ಲಿ ಸೂರ್ಯನ ಕಿರಣಗಳು ಚರ್ಮದ ಹೊರಪದರ ಹಾನಿಗೊಳಿಸಬಹುದು. ಎಣ್ಣೆ ಹಿಡಿದಿಟ್ಟು ರಂಧ್ರ ಮುಚ್ಚಿ ಹೋಗುವಂತೆ ಮಾಡುತ್ತವೆ. ಜಿಡ್ಡು ಇರುವ ತುರಿಕೆ ಬರುವ ಸಾಂಪ್ರದಾಯಿಕ ಸನ್ ಸ್ಕ್ರೀನ್ಗಳಿಗೆ ಭಿನ್ನವಾಗಿ ಸತು ಆಕ್ಸೈಡ್ನ ಖನಿಜ ಅಥವಾ ಹೈಬ್ರಿಡ್ ಸೂತ್ರ ಆರಿಸಿಕೊಳ್ಳಿ. ಏಕೆಂದರೆ ಇದು ನೈಸರ್ಗಿಕ ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸಿ ಚರ್ಮಕ್ಕೆ ರಕ್ಷಣೆ ಒದಗಿಸುತ್ತದೆ.
ಆಧುನಿಕ ಕಾಸ್ಮೆಟಿಕ್ ವಿಧಾನ:
ಅತಿ ಪರಿಣಾಮಕಾರಿ ಚರ್ಮದ ಆರೈಕೆ ದಿನಚರಿಯು ಆಳವಾದ ಮೊಡವೆ ಕಲೆಗಳು ಮತ್ತು ಅಸಮ ಚರ್ಮದ ರಚನೆ ಗುಣಪಡಿಸಲು ವಿಫಲವಾದಾಗ ಆಲ್ಮಾ ಹೈಬ್ರಿಡ್ ನಂತಹ ವೃತ್ತಿಪರ ಚಿಕಿತ್ಸೆಗಳು ಚರ್ಮದ ಹಾನಿಯನ್ನು ಮರುಸ್ಥಾಪಿಸಲು ಪರಿಣಾಮಕಾರಿ. ಮುಂದುವರಿದ ಕಾಸ್ಮೆಟಿಕ್ ವಿಧಾನದಲ್ಲಿ ಎರಡು ಲೇಸರ್ ವಿಧಗಳನ್ನು ಬಳಸಲಾಗುತ್ತದೆ. ಇದು ನೈಸರ್ಗಿಕ ಗುಣಪಡಿಸುವ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಕಾಲಜನ್ ಉತ್ಪಾದನೆ ಹೆಚ್ಚಿಸುತ್ತದೆ. ಸಾಂಪ್ರದಾಯಿಕ ಲೇಸರ್ಗಿಂತ ವೇಗವಾಗಿ ಗುಣಪಡಿಸುತ್ತದೆ.
ಸೂಚನೆ: ಈ ಲೇಖನವನ್ನು ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆಯೇ ವಿನಾ ವೃತ್ತಿಪರ ವೈದ್ಯರಿಗೆ ಪರ್ಯಾಯ ಸಲಹೆಗಳಲ್ಲ. ಯಾವುದೇ ರೀತಿಯ ಚರ್ಮದ ಸಲಹೆಗಳಿಗೆ ವೃತ್ತಿಪರ ವೈದ್ಯರನ್ನು ಸಂಪರ್ಕಿಸಿ.