ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು ದೂರದರ್ಶನ ಕೇಂದ್ರ
ಅಭ್ಯರ್ಥಿಗಳು ಪ್ರಸಾರ ಭಾರತಿ ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆಯಿಂದ ಅಧಿಕೃತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ (Doordarshan Kendra Bengaluru) ಖಾಲಿ ಇರುವ ಪ್ರಸಾರ ಸಹಾಯಕ, ನಿರೂಪಕ ಹಾಗೂ ಸಿಜಿ ಆಪರೇಟರ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 12ನೇ ತರಗತಿ ಅಥವಾ ಪದವಿ ಮುಗಿಸಿದ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹರಾದವರಿಗೆ ಪ್ರತಿ ದಿನ ಅಥವಾ ಪಾಳಿ ಲೆಕ್ಕದಲ್ಲಿ ವೇತನ ನೀಡಲಾಗುವುದು.
ಉದ್ಯೋಗದ ಮುಖ್ಯಾಂಶಗಳು
* ಸಂಸ್ಥೆಯ ಹೆಸರು: ದೂರದರ್ಶನ ಕೇಂದ್ರ, ಬೆಂಗಳೂರು
* ಹುದ್ದೆಗಳ ಹೆಸರು: ಪ್ರಸಾರ ಸಹಾಯಕ (Broadcast Assistant), ಆಂಕರ್ (Anchor/ನಿರೂಪಕ), ಸಿಜಿ ಆಪರೇಟರ್
* ಒಟ್ಟು ಹುದ್ದೆಗಳ ಸಂಖ್ಯೆ: 04
* ವೇತನ ಶ್ರೇಣಿ: ದಿನಕ್ಕೆ 1,125 ರೂ. ರಿಂದ 3,000 ರೂ. ವರೆಗೆ (ಪ್ರತಿದಿನ/ಪಾಳಿ)
* ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 27 ಆಗಸ್ಟ್ 2026
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್ 2026
ಹುದ್ದೆಗಳು ಮತ್ತು ಅರ್ಹತೆ
ಸುದ್ದಿ ನಿರೂಪಕರ ಹುದ್ದೆಗೆ ಪದವಿ ಹಾಗೂ ಕನ್ನಡ ಭಾಷೆಯಲ್ಲಿ ಪ್ರವೀಣತೆ ಹೊಂದಿರಬೇಕು. ಈ ಹುದ್ದೆಗೆ 21ರಿಂದ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವೆಬ್‌ಸೈಟ್/ಪ್ರಸಾರ ಸಹಾಯಕ ಹುದ್ದೆಗೆ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಅಥವಾ ಪದವಿ ಹೊಂದಿರಬೇಕು. ಈ ಹುದ್ದೆಗೆ 21ರಿಂದ 50 ವರ್ಷ ವಯೋಮಿತಿ ಇದೆ. ಸಿಜಿ ಆಪರೇಟರ್ ಹುದ್ದೆಗೆ 10+2 ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ಜ್ಞಾನ ಹೊಂದಿರಬೇಕು. ಈ ಹುದ್ದೆಗೆ 21ರಿಂದ 50 ವರ್ಷ ವಯೋಮಿತಿ ಇದೆ.
ಸಂಭಾವನೆ (ಪ್ರತಿ ಪಾಳಿಗೆ/ದಿನಕ್ಕೆ)
* ವೆಬ್‌ಸೈಟ್ ಸಹಾಯಕ: 1,500 ರೂ.
* ಪ್ರಸಾರ ಸಹಾಯಕ: 1,500 ರೂ.
* CG ಆಪರೇಟರ್: 1,125 ರೂ.
* ಸುದ್ದಿ ನಿರೂಪಕರು: 3,000 ರೂ.
ಅರ್ಜಿ ಸಲ್ಲಿಸುವ ವಿಧಾನ
* ಅಭ್ಯರ್ಥಿಗಳು Prasar Bharati Official Website ಅಥವಾ ಅಧಿಸೂಚನೆಯಿಂದ ಅಧಿಕೃತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ನಿಮ್ಮ ಇತ್ತೀಚಿನ ಛಾಯಾಚಿತ್ರ, ಸಂಪೂರ್ಣ ವಿವರಗಳೊಂದಿಗೆ (Bio-data) ವಿದ್ಯಾರ್ಹತೆ, ವಯಸ್ಸು ಮತ್ತು ಅನುಭವದ ಪ್ರಮಾಣಪತ್ರಗಳ ಸ್ವಯಂ-ದೃಢೀಕರಿಸಿದ ನಕಲುಗಳನ್ನು ಲಗತ್ತಿಸಬೇಕು.
* ಸ್ಕ್ಯಾನ್ ಮಾಡಿದ ದಾಖಲೆಗಳನ್ನು chandananewsvacancy@gmail.com ಎಂಬ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. (ಇಮೇಲ್‌ನ ವಿಷಯದ ಸಾಲಿನಲ್ಲಿ (Subject line) ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು.)
* ಅಂಚೆ ಮೂಲಕ: ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ಸ್ವಯಂ-ದೃಢೀಕರಿಸಿದ ದಾಖಲೆಗಳ ಪ್ರತಿಯನ್ನು ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಅಂಚೆ ಮೂಲಕ ತಲುಪಿಸಬೇಕು:
ವಿಳಾಸ:
RNU ಮುಖ್ಯಸ್ಥರು,
ದೂರದರ್ಶನ ಕೇಂದ್ರ,
ಬೆಂಗಳೂರು, ಕರ್ನಾಟಕ – 560006.
ಷರತ್ತುಗಳು
* ಈ ಹುದ್ದೆಗಳಿಗೆ ಆಫ್‌ಲೈನ್ ಹಾಗೂ ಇಮೇಲ್ ಎರಡೂ ಮಾರ್ಗಗಳ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
* ತಿಂಗಳಿಗೆ ಗರಿಷ್ಠ 7 ಅಸೈನ್‌ಮೆಂಟ್‌ಗಳನ್ನಷ್ಟೇ ನೀಡಲಾಗುವುದು.
* ಶಾಶ್ವತ ಉದ್ಯೋಗಕ್ಕೆ ಯಾವುದೇ ಹಕ್ಕು ಇರುವುದಿಲ್ಲ.
* ಅರ್ಜಿ ಶುಲ್ಕವಿಲ್ಲ; ಪರೀಕ್ಷೆಗಳು/ಸಂದರ್ಶನಗಳಿಗೆ TA/DA ಇಲ್ಲ.
* ಬೆಂಗಳೂರು ನಿವಾಸಿಗಳಿಗೆ ಆದ್ಯತೆ.