ಭಾರತೀಯ ನೌಕಾಪಡೆಯಲ್ಲಿ ಬಿ.ಟೆಕ್ ಕೆಡೆಟ್ ಪ್ರವೇಶ ಯೋಜನೆಯಡಿ ನೇಮಕಾತಿ ಪ್ರಕ್ರಿಯೆ
Photo Credit : joinindiannavy.gov.in
ಈ ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೇರವಾಗಿ ನೌಕಾಪಡೆಯ ಪ್ರತಿಷ್ಠಿತ ಅಕಾಡೆಮಿಯಲ್ಲಿ ಬಿಟೆಕ್ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣ ಪೂರ್ಣಗೊಂಡ ಬಳಿಕ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಲಭ್ಯವಾಗುತ್ತದೆ.
ಪಿಯುಸಿ ನಂತರ ಭಾರತೀಯ ನೌಕಾಪಡೆಯಲ್ಲಿ ಬಿ.ಟೆಕ್ ಕ್ಯಾಡೆಟ್ ಪ್ರವೇಶ ಯೋಜನೆಯಡಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಮೇ 29ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈ ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೇರವಾಗಿ ನೌಕಾಪಡೆಯ ಪ್ರತಿಷ್ಠಿತ ಅಕಾಡೆಮಿಯಲ್ಲಿ ಬಿ.ಟೆಕ್ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣ ಪೂರ್ಣಗೊಂಡ ಬಳಿಕ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಬಿಟೆಕ್ ಪದವಿ ಲಭ್ಯವಾಗುತ್ತದೆ. ತರಬೇತಿ ಅವಧಿಯ ಸಂಪೂರ್ಣ ವೆಚ್ಚವನ್ನು ಭಾರತೀಯ ನೌಕಾಪಡೆಯೇ ಭರಿಸಲಿದೆ. ತರಬೇತಿ ಪೂರ್ಣಗೊಂಡ ನಂತರ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://www.joinindiannavy.gov.in/ ಮೂಲಕ ಅರ್ಜಿ ಸಲ್ಲಿಸಬಹುದು.
📌ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ: 29 ಮೇ 2026
• ಆನ್ಲೈನ್ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ: 18 ಜೂನ್ 2026
📌ಪ್ರಮುಖ ಮಾಹಿತಿ
ಅರ್ಹ ಅಭ್ಯರ್ಥಿಗಳು: ತಾಂತ್ರಿಕ ಶಾಖೆಗಳಲ್ಲಿ ಶಾಶ್ವತ ಹುದ್ದೆಗಾಗಿ ಅವಿವಾಹಿತ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಕೋರ್ಸ್: ಎಝಿಮಾಲದ ಭಾರತೀಯ ನೌಕಾಪಡೆಯ ಅಕಾಡೆಮಿಯಲ್ಲಿ (ಐಎನ್ಎ) ನಾಲ್ಕು ವರ್ಷದ ಬಿಟೆಕ್
📌ಖಾಲಿ ಹುದ್ದೆಗಳು
ಮೆಕಾನಿಕಲ್ ಎಂಜಿನಿಯರಿಂಗ್- 30 (ಮಹಿಳೆಯರಿಗೆ ಗರಿಷ್ಠ 8, ಮೆಕಾನಿಕಲ್ & ಎಲೆಕ್ಟ್ರಾನಿಕ್ಸ್ ತಲಾ 4)
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಎಂಜಿನಿಯರಿಂಗ್- 30
7 ಅಭ್ಯರ್ಥಿಗಳು ನೌಕಾ ವಾಸ್ತುಶಿಲ್ಪ ಮತ್ತು ಹಡಗು ನಿರ್ಮಾಣದ ಕ್ಷೇತ್ರಕ್ಕೆ ಹೋಗಬಹುದು.
📌ವಯೋಮಿತಿ
02 ಜುಲೈ 2007 ಮತ್ತು 01 ಜನವರಿ 2010 ನಡುವೆ ಜನಿಸಿದವರು.
📌ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದ ವಿಷಯಗಳಲ್ಲಿ ಒಟ್ಟು ಕನಿಷ್ಠ ಶೇ 70ರಷ್ಟು ಅಂಕಗಳನ್ನು ಪಡೆದಿರಬೇಕು. ಜೊತೆಗೆ 10ನೇ ಅಥವಾ 12ನೇ ತರಗತಿಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ ಶೇ 50 ಅಂಕಗಳನ್ನು ಪಡೆದಿರಬೇಕು. ಜೊತೆಗೆ ಅಭ್ಯರ್ಥಿಗಳು ಜೆಇಇ ಮೈನ್ ಪರೀಕ್ಷೆ ಬರೆದಿರಬೇಕು. ಜೆಇಇ ಮೈನ್ ಸಾಮಾನ್ಯ ರ‍್ಯಾಂಕ್ ಪಟ್ಟಿ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
📌ವೈದ್ಯಕೀಯ ಅರ್ಹತೆಗಳು
ಅಭ್ಯರ್ಥಿಗಳು ನೌಕಾಸೇನೆಯ ವೈದ್ಯಕೀಯ ಮಾನದಂಡಗಳನ್ನು ತಲುಪಬೇಕು. ಎಸ್ಎಸ್ಬಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ವೈದ್ಯಕೀಯ ಮಾನದಂಡಗಳಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ನೌಕಾಪಡೆ ಸ್ಪಷ್ಟಪಡಿಸಿದೆ. ಅಂತಿಮವಾಗಿ ಎಸ್ಎಸ್ಬಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಪ್ರಕಟವಾಗುತ್ತದೆ.
📌ಆಯ್ಕೆ ಪ್ರಕ್ರಿಯೆ
• ಜೆಇಇ ಮೈನ್ ಸಾಮಾನ್ಯ ರ‍್ಯಾಂಕ್ ಪಟ್ಟಿ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
• ಎಸ್ಎಸ್ಬಿ ಸಂದರ್ಶನ: ಸೆಪ್ಟೆಂಬರ್ 2026ರಿಂದ ಬೆಂಗಳೂರು, ಭೋಪಾಲ್, ಕೋಲ್ಕತ್ತಾ, ವಿಶಾಖಪಟ್ಟಣ.
• ಇಮೇಲ್/ಎಸ್ಎಂಎಸ್ ಮೂಲಕ ಸಂವಹನ ಮಾಡಲಾಗುವುದು. ಅಭ್ಯರ್ಥಿಗಳು ಸಂಪರ್ಕ ವಿವರಗಳನ್ನು ಬದಲಿಸಬಾರದು.
• ಸಂದರ್ಶನಕ್ಕೆ ಬರುವ AC 3-ಟೈರ್ ರೈಲ್ವೇ ವೆಚ್ಚ ಭರಿಸಲಾಗುವುದು.
• ಎಸ್ಎಸ್ಬಿ ಅಂಕಗಳು ಮತ್ತು ವೈದ್ಯಕೀಯ ಫಿಟ್ನೆಸ್ ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ದಾಖಲಾತಿಗೆ ಮೊದಲು ಪೊಲೀಸ್ ಮತ್ತು ನಡವಳಿಕೆ ಪರಿಶೀಲನೆ ನಡೆಸಲಾಗುವುದು.