×
Ad

ಟೆಸ್ಲಾ ಸಂಸ್ಥೆಯಲ್ಲಿ ಭಾರತೀಯ ಯುವಕರಿಗೆ ಇಂಟರ್ನ್‌ಗಳಾಗುವ ಅವಕಾಶ; ಇಲ್ಲಿದೆ ಮಾಹಿತಿ…

Update: 2026-01-21 18:55 IST

Photo Credit : Tesla, Inc.

ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಇಂಟರನ್ಶಿಪ್ ಕಾರ್ಯಕ್ರಮವನ್ನು ಆರಂಭಿಸಿದ್ದು, ಬೆಂಗಳೂರು, ದಿಲ್ಲಿ, ಮುಂಬೈ, ಗುರುಗ್ರಾಮ್, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಅಹಮದಾಬಾದ್ ನಗರಗಳಲ್ಲಿ ಇಂಟರ್ನ್ಗಳನ್ನು ನೇಮಿಸಿಕೊಳ್ಳುತ್ತಿದೆ.

ಉದ್ಯಮಿ ಎಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆ ಅಧಿಕೃತವಾಗಿ ಭಾರತಕ್ಕೆ ಪ್ರವೇಶಿಸಿದ್ದು, ಭಾರತೀಯ ಯುವಕರಿಗೆ ಉದ್ಯೋಗವಕಾಶವನ್ನು ಘೋಷಿಸಿದೆ. ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಟೆಸ್ಲಾ ಸಂಸ್ಥೆ ಈ ಬಗ್ಗೆ ವಿವರ ನೀಡಿದೆ. ಭಾರತೀಯ ಕಾಲೇಜು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಮೂಲಕ ಟೆಸ್ಲಾದಲ್ಲಿ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂಟರ್ನ್ಶಿಪ್ ಮೂಲಕ ಯುವಕರನ್ನು ನೇಮಿಸಿಕೊಳ್ಳುವುದಾಗಿ ಟೆಸ್ಲಾ ಹೇಳಿದೆ.

ಟೆಸ್ಲಾ ಹೆಸರಿನಡಿಯಲ್ಲಿ ಸ್ಟಾರ್ಲಿಂಕ್ ಇಂಟರ್ನೆಟ್ ಯೋಜನೆ ಮತ್ತು ಎಲೆಕ್ಟ್ರಿಕ್ ವಾಹನಗಳ ದೈತ್ಯ ಸಂಸ್ಥೆ ವಿಶ್ವಾದ್ಯಂತ ತನ್ನದೇ ಆದ ಪ್ರಭಾವವನ್ನು ಬೀರುತ್ತಿದೆ. ಇದೀಗ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಆರಂಭಿಸಿದ್ದು, ಬೆಂಗಳೂರು, ದೆಹಲಿ, ಮುಂಬೈ, ಗುರುಗ್ರಾಮ್, ಹೈದರಾಬಾದ್, ಚೆನ್ನೈ, ಪುಣೆ ಮತ್ತು ಅಹಮದಾಬಾದ್ ನಗರಗಳಲ್ಲಿ ಇಂಟರ್ನ್ಗಳನ್ನು ನೇಮಿಸಿಕೊಳ್ಳುತ್ತಿದೆ.

ಭಾರತದಲ್ಲಿ ಟೆಸ್ಲಾದ ಚಿಲ್ಲರೆ ವಹಿವಾಟು ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಸೇಲ್ಸ್ ಇಂಟರ್ನ್ಗಳಿಗೆ ತರಬೇತಿ ನೀಡಲಾಗುತ್ತಿದೆ. ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳು ಟೆಸ್ಲಾದ ಚಿಲ್ಲರೆ ವಹಿವಾಟು ಮತ್ತು ಉತ್ಪಾದನಾ ಮಾರ್ಗಸೂಚಿಗಳನ್ನು ಅರ್ಥಮಾಡಿಕೊಂಡು ವಾಸ್ತವಿಕ ಉದ್ಯೋಗ ಅನುಭವವನ್ನು ಕೂಡ ಸಂಪಾದಿಸಬಹುದು.

ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳು ಟೆಸ್ಲಾದ ಮಾರಾಟ ತಂಡದಲ್ಲಿದ್ದು ಗ್ರಾಹಕರೊಂದಿಗೆ ನೇರ ಸಂವಹನ ಆಡುವುದು, ವಾಹನಗಳ ಮಾರಾಟ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಅನುಭವ ಪಡೆಯಬಹುದು. ಶೋರೂಂಗೆ ಭೇಟಿ ನೀಡುವ ಗ್ರಾಹಕರಿಗೆ ಟೆಸ್ಲಾ ಕುರಿತಾಗಿ ಮತ್ತು ಅದರ ಎಲೆಕ್ಟ್ರಿಕ್ ವಾಹನಗಳು ಮತ್ತು ಸುಸ್ಥಿರ ಅಭಿವೃದ್ಧಿ ಬಗ್ಗೆ ವಿವರಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News