ಎಲ್‌ಐಸಿಯಲ್ಲಿ ಮಹಿಳೆಯರಿಗೆ ಬಿಮಾ ಸಖಿ ಯೋಜನೆ ಜಾರಿ
photo credit: licdelhionline
10ನೇ ತರಗತಿ ಪಾಸಾಗಿರುವ ಮಹಿಳೆಯರಿಗೆ ಇದು ಸುವರ್ಣಾವಕಾಶ. ಆದರೆ, ಬಹಳ ಸುಲಭದ ಯೋಜನೆಯೆಂದು ಕಂಡರೂ ಕಠಿಣ ಪರಿಶ್ರಮ ಹಾಕಿದಲ್ಲಿ ಮಾತ್ರ ಫಲ ಸಿಗಲಿದೆ.
ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಜಂಟಿಯಾಗಿ ಮಹಿಳೆಯರಿಗಾಗಿ ಬಿಮಾ ಸಖಿ ಯೋಜನೆ ಜಾರಿಗೆ ತಂದಿದೆ. 10ನೇ ತರಗತಿ ಪಾಸಾಗಿರುವ ಮಹಿಳೆಯರಿಗೆ ಇದು ಸುವರ್ಣಾವಕಾಶ. ಇದು ಬಹಳ ಸುಲಭದ ಯೋಜನೆಯೆಂದು ಕಂಡರೂ ಕಠಿಣ ಪರಿಶ್ರಮ ಹಾಕಿದಲ್ಲಿ ಮಾತ್ರ ಫಲ ಸಿಗಲಿದೆ. ಆದರೆ, ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸುವರ್ಣ ಅವಕಾಶವಾಗಿರುತ್ತದೆ.
ಬಿಮಾ ಸಖಿಯಾದವರಿಗೆ ಕೆಲಸದ ಜೊತೆಗೆ ಮೂರು ವರ್ಷಗಳ ಕಾಲ ಸರ್ಕಾರದಿಂದ ನಿಗದಿತ ಹಣ (ಸ್ಟೈಪೆಂಡ್) ದೊರೆಯುತ್ತದೆ.
ಏನಿದು ಬಿಮಾ ಸಖಿ ಯೋಜನೆ?
ಮಹಿಳೆಯರು ಎಲ್‌ಐಸಿಯ ವಿಮಾ ಪಾಲಿಸಿಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಬಿಮಾ ಸಖಿಯರದ್ದಾಗಿದೆ. ವಿಶೇಷವೆಂದರೆ, ಮಾಡುವ ಕೆಲಸಕ್ಕೆ ಸಿಗುವ ಕಮಿಷನ್ ಹೊರತಾಗಿ, ಆರಂಭಿಕ ಮೂರು ವರ್ಷಗಳ ಕಾಲ ಸರ್ಕಾರ ನಿಮಗೆ ತಿಂಗಳ ಸ್ಟೈಫಂಡ್ ನೀಡುತ್ತದೆ. ಆದರೆ ಬಿಮಾ ಸಖಿಯರು ಆರಿಸಿಕೊಂಡ ಪ್ರದೇಶದಲ್ಲಿ ಈಗಾಗಲೇ ವಿಮೆ ಮಾಡಿಸಿಕೊಂಡವರು ಹೆಚ್ಚಿರಬಹುದು. ಅಂತಹ ಸಂದರ್ಭದಲ್ಲಿ ಹೊಸ ವಿಮೆಗಳನ್ನು ಮಾರುವುದು ಸುಲಭವಲ್ಲ. ಬದಲಾಗಿ ಎರಡನೇ ವರ್ಷದಿಂದ ಸ್ಟೈಪೆಂಡ್ ಸಿಗಬೇಕೆಂದರೆ ಟಾರ್ಗೆಟ್ ಇರುತ್ತದೆ.
ಮೊದಲ ವರ್ಷ ಮಾಸಿಕ ಸ್ಟೈಪೆಂಡ್ ಆಗಿ ರೂ 7000 ಸಿಗುತ್ತದೆ. 2ನೇ ವರ್ಷದಲ್ಲಿ ರೂ 6000 ಕಮಿಷನ್ ಸಿಗಲಿದೆ. 3ನೇ ವರ್ಷದಲ್ಲಿ ರೂ 5000 ಕಮಿಷನ್ ಸಿಗಲಿದೆ. 2ನೇ ವರ್ಷದಿಂದ ಸ್ಟೈಫಂಡ್ ಪಡೆಯಲು ಕನಿಷ್ಠ ಟಾರ್ಗೆಟ್ ತಲುಪಿರಬೇಕು. ಎರಡನೇ ಮತ್ತು ಮೂರನೇ ವರ್ಷ ಸ್ಟೈಫಂಡ್ ಮುಂದುವರಿಯಬೇಕಾದರೆ, ನೀವು ಮಾಡಿದ ಹಿಂದಿನ ವರ್ಷದ ಪಾಲಿಸಿಗಳಲ್ಲಿ ಕನಿಷ್ಠ ಶೇ 65 ರಷ್ಟು ಚಾಲ್ತಿಯಲ್ಲಿರಬೇಕು.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
18 ವರ್ಷದಿಂದ 70 ವರ್ಷದೊಳಗಿನ ಯಾವುದೇ ಮಹಿಳೆ ಅರ್ಜಿ ಸಲ್ಲಿಸಬಹುದು. ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಐಸಿಎಆರ್ (ICAR) ನಡೆಸುವ ನೇಮಕಾತಿ ಪೂರ್ವ ಪರೀಕ್ಷೆಯಲ್ಲಿ ಪಾಸಾಗಬೇಕು. ಈಗಾಗಲೇ ಎಲ್‌ಐಸಿ ಏಜೆಂಟ್ ಆಗಿರುವವರು ಅಥವಾ ಅವರ ಹತ್ತಿರದ ಸಂಬಂಧಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ.
ಬಿಮಾ ಸಖಿ ಪರೀಕ್ಷೆಯು ತುಂಬಾ ಸುಲಭವಾಗಿರುತ್ತದೆ. ಅರ್ಜಿ ಸಲ್ಲಿಸುವ ಮೊದಲು ಸಮೀಪದ ಎಲ್‌ಐಸಿ ಶಾಖೆಗೆ ಭೇಟಿ ನೀಡಿ ‘ಡೆವಲಪ್‌ಮೆಂಟ್ ಆಫೀಸರ್’ (DO) ಅವರನ್ನು ಭೇಟಿ ಮಾಡಿ. ಅವರು ಪರೀಕ್ಷೆಗೆ ಬೇಕಾದ ಉಚಿತ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಮೂರು ವರ್ಷಗಳ ನಂತರ ಮುಂದೇನು?
3 ವರ್ಷಗಳ ನಂತರ ಸಾಮಾನ್ಯ ಎಲ್‌ಐಸಿ ಏಜೆಂಟ್ ಆಗಿ ಮುಂದುವರಿಯಬಹುದು. ಒಂದು ವೇಳೆ ಪದವೀಧರರಾಗಿದ್ದರೆ (Degree), 5 ವರ್ಷಗಳ ನಂತರ ಎಲ್‌ಐಸಿಯಲ್ಲಿ ADO (ಅಪ್ರೆಂಟಿಸ್ ಡೆವಲಪ್‌ಮೆಂಟ್ ಆಫೀಸರ್) ಹುದ್ದೆಗೆ ನೇರ ಪರೀಕ್ಷೆ ಬರೆಯುವ ಅವಕಾಶ ಸಿಗುತ್ತದೆ.
ಕಮಿಷನ್ ಹೇಗೆ ಲೆಕ್ಕ ಹಾಕಲಾಗುತ್ತದೆ?
ಮೊದಲ ವರ್ಷದಲ್ಲಿ ಮಾಡುವ ಪಾಲಿಸಿಗಳ ಸಂಖ್ಯೆಗೆ ಅನುಗುಣವಾಗಿ ಕಮಿಷನ್ ಇರುತ್ತದೆ. ಉದಾಹರಣೆಗೆ, ವರ್ಷಕ್ಕೆ 24 ಪಾಲಿಸಿಗಳನ್ನು ಮಾಡಿದರೆ ಅಂದಾಜು 48,000 ರೂ. ಕಮಿಷನ್ ಜೊತೆಗೆ ನಿಮ್ಮ ತಿಂಗಳ ಸ್ಟೈಫಂಡ್ ಕೂಡ ಸಿಗುತ್ತದೆ.