×
Ad

ಭಾರತೀಯ ರೈಲ್ವೆಯಿಂದ 22,000 ಲೆವೆಲ್-1(ಗ್ರೂಪ್ ಡಿ) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ

Update: 2026-01-07 15:59 IST

Photo Credit : PTI 

22,000 ಲೆವೆಲ್ 1 ಹುದ್ದೆಗಳ ನೇಮಕಾತಿಯಲ್ಲಿ ಪಾಯಿಂಟ್‌ಮೆನ್, ಸಹಾಯಕರು, ಟ್ರ್ಯಾಕ್ ನಿರ್ವಹಣೆದಾರರು ಮತ್ತು ವಿವಿಧ ತಾಂತ್ರಿಕ ವಿಭಾಗಗಳಿಗೆ ಭರ್ತಿ ಮಾಡಲಾಗುತ್ತದೆ.

ಭಾರತೀಯ ರೈಲ್ವೆ ಮತ್ತೊಮ್ಮೆ ದೇಶದ ಅತಿದೊಡ್ಡ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ಅಧಿಸೂಚನೆ ಸಂಖ್ಯೆ CEN 09/2025 ಅಡಿಯಲ್ಲಿ ಒಟ್ಟು 22,000 ಲೆವೆಲ್-1 ಹುದ್ದೆಗಳನ್ನು ಘೋಷಿಸಿದೆ. ಸುಮಾರು 22,000 ಲೆವೆಲ್-1 (ಗ್ರೂಪ್ ಡಿ) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ 2026ರ ಜನವರಿ 21ರಿಂದ ಫೆಬ್ರವರಿ 20ರವರೆಗೆ ಆನ್‌ಲೈನ್ ಮೂಲಕ ನಡೆಯಲಿದೆ.

ಈ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾದವರು/ ಐಟಿಐ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು, ಆಯ್ಕೆ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ದೈಹಿಕ ದಕ್ಷತೆ ಪರೀಕ್ಷೆ ಇರಲಿದೆ. 22,000 ಲೆವೆಲ್ 1 ಹುದ್ದೆಗಳ ನೇಮಕಾತಿಯಲ್ಲಿ ಪಾಯಿಂಟ್‌ಮೆನ್, ಸಹಾಯಕರು, ಟ್ರ್ಯಾಕ್ ನಿರ್ವಹಣೆದಾರರು (ಗ್ರೇಡ್ IV) ಮತ್ತು ವಿವಿಧ ತಾಂತ್ರಿಕ ವಿಭಾಗಗಳಿಗೆ (ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಪ್ರಮುಖ ವಿವರಗಳು:

* ಹುದ್ದೆಗಳ ಸಂಖ್ಯೆ: ಸುಮಾರು 22,000 ಲೆವೆಲ್-1 (ಗ್ರೂಪ್ ಡಿ) ಹುದ್ದೆಗಳು.

* ಹುದ್ದೆಗಳ ವಿಧ: ಪಾಯಿಂಟ್‌ಮೆನ್, ಟ್ರ್ಯಾಕ್ ನಿರ್ವಹಣೆದಾರರು, ಸಹಾಯಕರು (ಸಿಗ್ನಲ್, ಟೆಲಿಕಾಂ, etc.).

* ಅರ್ಜಿ ಸಲ್ಲಿಕೆ ದಿನಾಂಕ: ಜನವರಿ 21, 2026 ರಿಂದ ಫೆಬ್ರವರಿ 20, 2026.

* ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ.

* ಅರ್ಹತೆ: 10ನೇ ತರಗತಿ/ಐಟಿಐ ಉತ್ತೀರ್ಣ.

* ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ.

ಪ್ರಮುಖ ದಿನಾಂಕಗಳು

* ನೋಟಿಸ್‌ ಬಿಡುಗಡೆ ಡಿಸೆಂಬರ್ 23, 2025

* ವಿವರವಾದ ಅಧಿಸೂಚನೆ: ಜನವರಿ 20, 2026

* ಆನ್‌ಲೈನ್ ಅರ್ಜಿ ಆರಂಭ: ಜನವರಿ 21, 2026

* ಕೊನೆಯ ದಿನಾಂಕ: ಫೆಬ್ರವರಿ 20, 2026 (ರಾತ್ರಿ 11:59)

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (ಮೆಟ್ರಿಕ್ಯುಲೇಷನ್) ಉತ್ತೀರ್ಣರಾಗಿರಬೇಕು. ತಾಂತ್ರಿಕ ಹುದ್ದೆಗಳಿಗೆ ಐಟಿಐ ಪ್ರಮಾಣಪತ್ರ ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (ಎನ್‌ಎಸಿ) ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಬಹುದು.

ವಯಸ್ಸಿನ ಮಿತಿ

2026 ಜನವರಿ 1ರಂತೆ ಅಭ್ಯರ್ಥಿಗಳು 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು. ಸರಕಾರಿ ನಿಯಮಗಳ ಪ್ರಕಾರ ಮೀಸಲು ವರ್ಗಗಳಿಗೆ (ಒಬಿಸಿಗೆ 3 ವರ್ಷಗಳು ಮತ್ತು ಎಸ್‌ಸಿ/ಎಸ್‌ಟಿಗೆ 5 ವರ್ಷಗಳು) ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ರೈಲ್ವೆ ಪಾರದರ್ಶಕ ಮತ್ತು ಬಹು-ಹಂತದ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಸಾಮಾನ್ಯ ವಿಜ್ಞಾನ, ಗಣಿತ, ತಾರ್ಕಿಕತೆ ಮತ್ತು ಸಾಮಾನ್ಯ ಅರಿವನ್ನು ಒಳಗೊಂಡ 100 ಪ್ರಶ್ನೆಗಳನ್ನು ಒಳಗೊಂಡ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರುತ್ತದೆ. ದೈಹಿಕ ದಕ್ಷತೆ ಪರೀಕ್ಷೆ (CBT)ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ದೈಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ (ಉದಾ. 35 ಕೆಜಿ ತೂಕದೊಂದಿಗೆ ಓಡುವುದು ಮತ್ತು ಪುರುಷರಿಗೆ 1000 ಮೀಟರ್ ಓಟವನ್ನು ಪೂರ್ಣಗೊಳಿಸುವುದು). ಅಂತಿಮವಾಗಿ, ಯಶಸ್ವಿ ಅಭ್ಯರ್ಥಿಗಳು ದಾಖಲೆ ಪರಿಶೀಲನೆ ಮತ್ತು ಆರೋಗ್ಯ ತಪಾಸಣೆಗೆ ಒಳಗಾಗುತ್ತಾರೆ.

ಸಂಬಳ ಮತ್ತು ಭತ್ಯೆಗಳು

ಆಯ್ಕೆಯಾದ ಅಭ್ಯರ್ಥಿಗಳು 7ನೇ ವೇತನ ಆಯೋಗದ ವೇತನ ಮ್ಯಾಟ್ರಿಕ್ಸ್‌ನ ಹಂತ 1ರ ಪ್ರಕಾರ ವೇತನವನ್ನು ಪಡೆಯುತ್ತಾರೆ. ಆರಂಭಿಕ ಮೂಲ ವೇತನವು 18,000ರೂ. ಆಗಿರುತ್ತದೆ. ಇದರಲ್ಲಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಇತರ ರೈಲ್ವೆ ಸೌಲಭ್ಯಗಳು ಸೇರಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತದೆ. ಅಭ್ಯರ್ಥಿಗಳು www.rrbapply.gov.in ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಶುಲ್ಕ 500 ರೂ. (ಸಿಬಿಟಿಯಲ್ಲಿ ಹಾಜರಾದ ನಂತರ 400 ರೂ. ಮರುಪಾವತಿಸಲಾಗುತ್ತದೆ), ಎಸ್‌ಸಿ/ಎಸ್‌ಟಿ, ಮಹಿಳೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಶುಲ್ಕ 250 ರೂ.ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News