×
Ad

KSCCFನಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Update: 2026-01-19 15:42 IST

Photo Credit : virtualofficeerp.com

ನೇಮಕಾತಿಯಡಿ 34 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.21,400 ರಿಂದ ರೂ.52,650ವರೆಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ.

ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF) 2026ರಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಕ್ಲರ್ಕ್, ಸೇಲ್ಸ್, ಅಸಿಸ್ಟಂಟ್ ಹಾಗೂ ಫಾರ್ಮಸಿಸ್ಟ್ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತಿ ಅಭ್ಯರ್ಥೀಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಬೆಂಗಳೂರು ಕೇಂದ್ರಿತವಾಗಿದೆ. ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:

https://virtualofficeerp.com/ksccf2026/new_registration

ಪ್ರಮುಖ ದಿನಾಂಕಗಳು

* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 09 ಜನವರಿ 2026

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಫೆಬ್ರವರಿ 2026

* ಶುಲ್ಕ ಪಾವತಿಗೆ ಕೊನೆಯ ದಿನಾಂಕ: 07 ಫೆಬ್ರವರಿ 2026

* ಪರೀಕ್ಷೆ ದಿನಾಂಕ: ಶೀಘ್ರವೇ ಪ್ರಕಟಿಸಲಾಗುವುದು

* ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು

* ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.

* ವಿವರಗಳಿಗೆ ಅಭ್ಯರ್ಥಿಗಳು ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.

ಅರ್ಜಿ ಶುಲ್ಕ

ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಎಸ್ಸಿ/ಎಸ್ಟಿ/ಪ್ರವರ್ಗ-1 ಹಾಗೂ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ರೂ 500 ಮತ್ತು ಇತರ ಎಲ್ಲಾ ವರ್ಗದವರಿಗೆ ರೂ 1,000 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಹುದ್ದೆಗಳ ವಿವರ

ಈ ನೇಮಕಾತಿಯಡಿ ಒಟ್ಟು 34 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,400 ರಿಂದ ರೂ.52,650 ವರೆಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ.

ವಯೋಮಿತಿ

ಅಭ್ಯರ್ಥಿಗಳು 2026 ಫೆಬ್ರವರಿ 07ರ ವೇಳೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು. ಸರಕಾರದ ನಿಯಮಗಳಂತೆ ವಿವಿಧ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯೂ ಇದೆ. ಕ್ಯಾಟ್–2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ, ಎಸ್ಸಿ/ಎಸ್‌ಟಿ ಹಾಗೂ ಪ್ರವರ್ಗ–1 ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಮತ್ತು ಪಿಡಬ್ಲ್ಯೂಡಿ ಹಾಗೂ ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಹತೆ

ವಿವಿಧ ಹುದ್ದೆಗಳಿಗೆ ವಿವಿಧ ಅರ್ಹತೆಯನ್ನು ಸೂಚಿಸಲಾಗಿದೆ. ಅಧಿಸೂಚನೆಯನ್ನು ಜಾಗರೂಕವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಸಂದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವಾಗ ಗಮನಹರಿಸಿ

KSCCF ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್ ಮತ್ತು ಫಾರ್ಮಸಿಸ್ಟ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು KSCCF ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳುವುದು ಅತ್ಯಂತ ಮುಖ್ಯ. ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಸರಿಯಾದ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಜೊತೆಗೆ ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆ, ವ್ಯಕ್ತಿ ವಿವರ ಮತ್ತು ಅನುಭವ ಪ್ರಮಾಣಪತ್ರಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಡಬೇಕು.

ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಇತ್ತೀಚಿನ ಫೋಟೋ ಹಾಗೂ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ನಂತರ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಮುಂದಿನ ಬಳಕೆಗೆ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News