×
Ad

ಜೆರುಸಲೇಂನಲ್ಲಿ ಸೊಮಾಲಿಲ್ಯಾಂಡ್ ರಾಯಭಾರ ಕಚೇರಿ ಕಾರ್ಯಾರಂಭ : ಒಐಸಿ ತೀವ್ರ ಖಂಡನೆ

Update: 2026-06-16 23:45 IST

OIC - Photo : LinkedIn

ಜೆರೂಸಲೆಮ್, ಜೂ.16: ಜೆರುಸಲೇಂನಲ್ಲಿ ಸೊಮಾಲಿಲ್ಯಾಂಡ್ ತನ್ನ ರಾಯಭಾರ ಕಚೇರಿಯನ್ನು ತೆರೆದಿರುವುದನ್ನು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ತೀವ್ರವಾಗಿ ಖಂಡಿಸಿದೆ.

`ಈ ಕ್ರಮವು ಕಾನೂನುಬಾಹಿರವಾಗಿದ್ದು, ವಿಶ್ವಸಂಸ್ಥೆಯ ಸನ್ನದು (ಚಾರ್ಟರ್) ಮತ್ತು ಅದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯಗಳ ಸಂಪೂರ್ಣ ಉಲ್ಲಂಘನೆಯಾಗಿದೆ.

`ಆಕ್ರಮಿತ ಜೆರುಸಲೇಂ ಮೇಲೆ ಆಕ್ರಮಣಕಾರಿ ಶಕ್ತಿಯಾಗಿರುವ ಇಸ್ರೇಲ್‍ಗೆ ಯಾವುದೇ ಸಾರ್ವಭೌಮತ್ವವಿಲ್ಲ. ಜೆರುಸಲೇಂನ ರಾಜಕೀಯ, ಕಾನೂನು ಅಥವಾ ಜನಸಂಖ್ಯಾ ಸ್ಥಿತಿಯನ್ನು ಬದಲಾಯಿಸುವ ಉದ್ದೇಶ ಹೊಂದಿರುವ ಎಲ್ಲಾ ನಿರ್ಧಾರಗಳು ಮತ್ತು ಕ್ರಮಗಳು ಅಂತರ್‍ರಾಷ್ಟ್ರೀಯ ಕಾನೂನಿನಡಿಯಲ್ಲಿ ಅಸಿಂಧು ಮತ್ತು ಶೂನ್ಯವಾಗಿವೆ' ಎಂದು ಒಐಸಿ ಖಂಡಿಸಿದೆ.

ಸೊಮಾಲಿಲ್ಯಾಂಡ್ ಸೋಮವಾರ ಜೆರುಸಲೇಂನಲ್ಲಿ ತನ್ನ ರಾಯಭಾರ ಕಚೇರಿಯನ್ನು ಉದ್ಘಾಟಿಸಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News