ನೆತನ್ಯಾಹು ತೀವ್ರ ಆಕ್ಷೇಪಗಳ ನಡುವೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ: ಟ್ರಂಪ್
Update: 2026-06-15 23:00 IST
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜೂ.15: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ತೀವ್ರ ಆಕ್ಷೇಪಗಳ ನಡುವೆಯೂ ಇರಾನ್ ಜೊತೆಗಿನ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನೆತನ್ಯಾಹು ‘ಬಹಳ ಕಠಿಣ ಮನುಷ್ಯ’. ಇರಾನ್ನೊಂದಿಗೆ ಶಾಂತಿ ಒಪ್ಪಂದದ ಚೌಕಟ್ಟನ್ನು ರೂಪಿಸಲು ಅಮೆರಿಕ ನಡೆಸಿದ ಪ್ರಯತ್ನಗಳಿಗಾಗಿ ಇಸ್ರೇಲ್ ಪ್ರಧಾನಿ ಕೃತಜ್ಞರಾಗಿರಬೇಕು. ಈ ಒಪ್ಪಂದದಿಂದ ಇಸ್ರೇಲ್ಗೇ ಲಾಭವಾಗಲಿದೆ ಮತ್ತು ಅಮೆರಿಕದ ರಾಜತಾಂತ್ರಿಕತೆಯು ಇಸ್ರೇಲ್ ಅನ್ನು ಸಂಭಾವ್ಯ ದೊಡ್ಡ ಆಪತ್ತಿನಿಂದ ರಕ್ಷಿಸಿದೆ. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಇದನ್ನು ಮಾಡಿದ್ದಕ್ಕಾಗಿ ಅವರು ನಮಗೆ ತುಂಬಾ ಕೃತಜ್ಞರಾಗಿರಬೇಕು. ಏಕೆಂದರೆ ಇರಾನ್ ಒಂದು ವೇಳೆ ಪರಮಾಣು ಅಸ್ತ್ರಗಳನ್ನು ಹೊಂದಿದ್ದರೆ, ಇಸ್ರೇಲ್ ಎರಡು ಗಂಟೆಗಳೂ ಉಳಿಯುತ್ತಿರಲಿಲ್ಲ’ ಎಂದು ಟ್ರಂಪ್ ಹೇಳಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.