×
Ad

ಹಿಜ್ಬುಲ್ಲಾವನ್ನು ನಿಭಾಯಿಸಲು ಇಸ್ರೇಲ್‍ಗಿಂತ ಸಿರಿಯಾ ಸೂಕ್ತ: ಡೊನಾಲ್ಡ್‌ ಟ್ರಂಪ್

Update: 2026-06-16 21:52 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ (Photo: PTI)

ಪ್ಯಾರಿಸ್, ಜೂ.16: ಹಿಜ್ಬುಲ್ಲಾ ವಿರುದ್ಧದ ಹೋರಾಟವನ್ನು ಸುದೀರ್ಘಗೊಳಿಸುತ್ತಿರುವುದಕ್ಕಾಗಿ ಇಸ್ರೇಲ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದು, ಲೆಬನಾನ್ ವಿಷಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು `ಹೆಚ್ಚು ಜವಾಬ್ದಾರಿಯುತವಾಗಿ' ಇರಬೇಕು ಎಂದು ಆಗ್ರಹಿಸಿದ್ದಾರೆ.

`ಹಿಜ್ಬುಲ್ಲಾವನ್ನು ಎದುರಿಸಲು ಇಸ್ರೇಲ್‍ಗಿಂತ ಸಿರಿಯಾ ಮುಂಚೂಣಿ ವಹಿಸಬೇಕು. ಹಿಜ್ಬುಲ್ಲಾವನ್ನು ನಿಭಾಯಿಸುವಲ್ಲಿ ಸಿರಿಯಾ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಹಿಜ್ಬುಲ್ಲಾವನ್ನು ಸಿರಿಯಾ ನೋಡಿಕೊಳ್ಳಲು ಬಿಡುವಂತೆ ನಾನು ಇಸ್ರೇಲ್‍ಗೆ ಸಲಹೆ ನೀಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಉತ್ತಮ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಮಾಧ್ಯಮದವರೊಂದಿಗೆ ಟ್ರಂಪ್ ಹೇಳಿದ್ದಾರೆ.

ಹಿಜ್ಬುಲ್ಲಾ ವಿರುದ್ಧದ ಇಸ್ರೇಲ್ ಅಭಿಯಾನದಿಂದ ಹೆಚ್ಚುತ್ತಿರುವ ಸಾವುನೋವುಗಳ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ ಟ್ರಂಪ್, `ಪ್ರತಿಯೊಬ್ಬರನ್ನೂ ಕೊಲ್ಲದೆ ಇಸ್ರೇಲ್‍ಗೆ ಈ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ, ಸಿರಿಯಾ ಆ ಕೆಲಸವನ್ನು ಮಾಡುತ್ತದೆ. ನಾನಿಲ್ಲದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ, ಏಕೆಂದರೆ ನಾನು ಮಾಡಿದ ಕೆಲಸವನ್ನು ಮಾಡಲು ಬೇರೆ ಯಾವುದೇ ಅಧ್ಯಕ್ಷರು ಸಿದ್ಧರಿರಲಿಲ್ಲ' ಎಂದು ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News