×
Ad

ಜಿ7 ಕಾರ್ಯಕಾರಿ ಅಧಿವೇಶನ | ಇರಾನ್, ಉಕ್ರೇನ್ ಬಗ್ಗೆ ಚರ್ಚೆ

Update: 2026-06-16 23:26 IST

Photo : gemini AI

ಪ್ಯಾರಿಸ್, ಜೂ.16: ಫ್ರಾನ್ಸ್‌ನ ಇವಿಯಾನ್‍ನಲ್ಲಿ ನಡೆದ ಜಿ7 ಶೃಂಗಸಭೆಯ ಎರಡನೇ ದಿನವಾದ ಮಂಗಳವಾರ ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಶಾಂತಿ ಒಪ್ಪಂದ ಹಾಗೂ ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆದಿದೆ.

ಮಂಗಳವಾರ ನಡೆದ `ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತರರಾಷ್ಟ್ರೀಯ ಒಗ್ಗಟ್ಟನ್ನು ಮರುನಿರ್ಮಾಣ ಮಾಡುವುದು' ಎಂಬ ಶೀರ್ಷಿಕೆಯ ಕಾರ್ಯನಿರತ ಅಧಿವೇಶನಕ್ಕೆ ಆಹ್ವಾನಿಸಲಾದ ಹಲವಾರು ಜಾಗತಿಕ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರೆಜಿಲ್, ಈಜಿಪ್ಟ್, ಕೀನ್ಯಾ ಮತ್ತು ದಕ್ಷಿಣ ಕೊರಿಯಾದ ನಾಯಕರು ಸೇರಿದ್ದರು. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಇದಕ್ಕೂ ಮುನ್ನ ಅವರು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಅವರೊಂದಿಗೂ ಟ್ರಂಪ್ ಸಭೆ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News