×
Ad

US Gold Card ಅನಾವರಣಗೊಳಿಸಿದ ಟ್ರಂಪ್

Update: 2025-12-11 21:39 IST

ಡೊನಾಲ್ಡ್ ಟ್ರಂಪ್ | Photo Credit ; AP \ PTI 

ವಾಷಿಂಗ್ಟನ್, ಡಿ.11: ಶ್ರೀಮಂತ ವಲಸಿಗರಿಗೆ ಅಮೆರಿಕಾದ ಪೌರತ್ವ ಒದಗಿಸುವ `ಯುಎಸ್ ಗೋಲ್ಡ್ ಕಾರ್ಡ್' ಅನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಾವರಣಗೊಳಿಸಿದ್ದು ಗೋಲ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಶ್ವೇತಭವನದಲ್ಲಿ ಬುಧವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

1 ಮಿಲಿಯ ಅಮೆರಿಕನ್ ಡಾಲರ್ ಪಾವತಿಸಿದವರು ಗೋಲ್ಡ್ ಕಾರ್ಡ್ ಪಡೆದು ಅಮೆರಿಕಾದ ಪೌರತ್ವ ಗಳಿಸುವ ಯೋಜನೆಯಿದಾಗಿದೆ. `ಅಮೆರಿಕಾದಲ್ಲಿ ಪದವಿ ಪಡೆದ ಬಳಿಕ ಭಾರತ, ಚೀನಾ ಇತ್ಯಾದಿ ವಿದೇಶಗಳ ವಿದ್ಯಾರ್ಥಿಗಳು ಮನೆಗೆ ಮರಳಬೇಕಾಗುತ್ತದೆ. ಇದು ಬೇಸರದ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಈ ಸಂದರ್ಭ ಟ್ರಂಪ್ ಹೇಳಿದ್ದಾರೆ.

ಅಮೆರಿಕಾಕ್ಕೆ ಗಣನೀಯ ಪ್ರಯೋಜನವನ್ನು ಒದಗಿಸುವ ವಲಸಿಗರಿಗೆ ರೂಪಿಸಲಾಗಿರುವ ಈ ವೀಸಾವು ಪೌರತ್ವಕ್ಕೆ ಹೊಸ ಮಾರ್ಗವನ್ನು ಸೃಷ್ಟಿಸುತ್ತದೆ. ಗೋಲ್ಡ್ ಕಾರ್ಡ್ ವೆಬ್‍ ಸೈಟ್ ಚಾಲನೆಯಲ್ಲಿದೆ ಮತ್ತು ಕಂಪೆನಿಗಳು ಅಮೆರಿಕಾದ ಉನ್ನತ ಕಂಪನಿಗಳಿಂದ ನೇಮಿಸಿಕೊಳ್ಳುವ ವಿದ್ಯಾರ್ಥಿಗಳನ್ನು ಗೋಲ್ಡ್ ಕಾರ್ಡ್ ಅನ್ನು ಖರೀದಿಸುವ ಮೂಲಕ ಅಮೆರಿಕಾದಲ್ಲೇ ಇರಿಸಿಕೊಳ್ಳಬಹುದು.

ಇದು ಗ್ರೀನ್ ಕಾರ್ಡ್ ನ ಮತ್ತೊಂದು ರೂಪವಾಗಿದೆ. ಆದರೆ ಅದಕ್ಕಿಂತ ಉತ್ತಮ, ಹೆಚ್ಚು ಶಕ್ತಿಶಾಲಿ ಮತ್ತು ಮತ್ತು ಪೌರತ್ವಕ್ಕೆ ಬಲಿಷ್ಠ ಮಾರ್ಗ ಕಲ್ಪಿಸುವ ವ್ಯವಸ್ಥೆ. ನಮ್ಮ ದೇಶಕ್ಕೆ ಉತ್ತಮ ವ್ಯಕ್ತಿಗಳು ಬರುವುದು ಒಂದು ಕೊಡುಗೆಯಾಗಿದೆ, ಯಾಕೆಂದರೆ ಇವರು ಪ್ರಚಂಡ ವ್ಯಕ್ತಿಗಳಾಗಿರುತ್ತಾರೆ. ಕಂಪೆನಿಗಳು ಈಗ ಗೋಲ್ಡ್ ಕಾರ್ಡ್ ನ ಪ್ರಯೋಜನ ಪಡೆಯಬಹುದು. ಇದು ಅಮೆರಿಕಾದಲ್ಲಿ ಶಾಶ್ವತ ನಿವಾಸ ಕಲ್ಪಿಸುವ ಗ್ರೀನ್ ಕಾರ್ಡ್ ಗಿಂತಲೂ ಹೆಚ್ಚಿನ ಪ್ರಯೋಜನವನ್ನು ಹೊಂದಿರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News