Screen grab : x

ಮಾಸ್ಕೊ, ನ. 24: ಮಾಸ್ಕೊ ಪ್ರದೇಶ ಮತ್ತು ರಶ್ಯ ಸ್ವಾಧೀನಪಡಿಸಿಕೊಂಡಿರುವ ಕ್ರಿಮಿಯನ್ ಪರ್ಯಾಯ ದ್ವೀಪ ಸೇರಿದಂತೆ ವಿಶಾಲ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಉಕ್ರೇನ್ ಸರಣಿ ಡ್ರೋನ್ ದಾಳಿ ನಡೆಸಿದೆ ಎಂದು ರಶ್ಯ ಆರೋಪಿಸಿದೆ. ಸುಮಾರು 700 ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

ರಾತ್ರಿಯ ವೇಳೆ ವಾಯು ರಕ್ಷಣಾ ಪಡೆಗಳು 699 ಉಕ್ರೇನಿಯನ್ ವೈಮಾನಿಕ ಮಾದರಿಯ ಡ್ರೋನ್ ಗಳನ್ನು ತಡೆದು ನಾಶಪಡಿಸಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಟೆಲಿಗ್ರಾಮ್ನಲ್ಲಿ ತಿಳಿಸಿದೆ. ಇವುಗಳಲ್ಲಿ 355 ಡ್ರೋನ್ ಗಳನ್ನು ಮಾಸ್ಕೊ ಪ್ರದೇಶದ ಕಡೆಗೆ ಹಾರಿಸಲಾಗಿತ್ತು. ರಾಜಧಾನಿಯನ್ನು ಸಮೀಪಿಸುತ್ತಿದ್ದ 63 ಡ್ರೋನ್ ಗಳನ್ನು ನಾಶಪಡಿಸಲಾಗಿದೆ ಎಂದು ಮಾಸ್ಕೊ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ತಿಳಿಸಿದ್ದಾರೆ.

ದಾಳಿಯಲ್ಲಿ ಯಾವುದೇ ಸಾವುನೋವು ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೃಷ್ಣ ಮೂರ್ತಿ , ವಾರ್ತಾಭಾರತಿ

contributor