Photo: x.com/Breaking911

ಕ್ಯಾಲಿಫೋರ್ನಿಯಾ: CEO ಹುದ್ದೆಗೆ ಮರುನೇಮಕಗೊಂಡ ಬಳಿಕ ಸೋಮವಾರ Nvidia ಪ್ರಧಾನ ಕಚೇರಿಗೆ ಮರಳಿದ ಜೆನ್ಸನ್ ಹುವಾಂಗ್ ಅವರನ್ನು ಉದ್ಯೋಗಿಗಳು ಸಂಭ್ರಮದಿಂದ ಸ್ವಾಗತಿಸಿದರು. ಉದ್ಯೋಗಿಗಳು ಚಪ್ಪಾಳೆ ತಟ್ಟಿ, ಘೋಷಣೆಗಳನ್ನು ಕೂಗಿದರೆ, ಓರ್ವ ಉದ್ಯೋಗಿ ಓಡಿ ಬಂದು ಅವರನ್ನು ಅಪ್ಪಿಕೊಂಡರು. ಈ ಕ್ಷಣಗಳ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

‘ಎರಡನೇ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಈ ಬಾರಿ ಇನ್ನೂ ಉತ್ತಮ CEO ಆಗುತ್ತೇನೆ’ ಎಂದು ಹುವಾಂಗ್ ಭಾವುಕರಾಗಿ ಹೇಳಿದರು. ಎದೆಯ ಮೇಲೆ ಕೈ ಇಟ್ಟು, ತಮ್ಮಿಂದ ಉಂಟಾದ ಅನಾನುಕೂಲತೆ ಮತ್ತು ಗಂಭೀರ ತಪ್ಪುಗಳಿಗಾಗಿ ಕ್ಷಮೆಯಾಚಿಸಿದರು.

ಕಚೇರಿಗೆ ಮರಳಿದ ಮೊದಲ ದಿನದ ಕುರಿತು ಹಾಸ್ಯವಾಡಿದ ಹುವಾಂಗ್, “ನನ್ನ ಬಳಿ ಈಗ ಕಂಪ್ಯೂಟರ್ ಇಲ್ಲ. IT ವಿಭಾಗ ನನಗೆ ಹೊಸ ಕಂಪ್ಯೂಟರ್ ನೀಡಲಿದೆ. ಈ ಬಾರಿ RTX Spark ಕಂಪ್ಯೂಟರ್ ಸಿಗಬಹುದು ಎಂದು ಆಶಿಸುತ್ತೇನೆ” ಎಂದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸಿ Nvidia ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ ಬಳಿಕ ಹುವಾಂಗ್ ಅವರನ್ನು CEO ಹುದ್ದೆಗೆ ಮರುನೇಮಕ ಮಾಡಲಾಗಿದೆ. ಟ್ರಂಪ್ ಅವರು ಹುವಾಂಗ್ ಅವರನ್ನು ‘ರಾಷ್ಟ್ರೀಯ ಸಂಪತ್ತು’ ಎಂದು ಹೇಳಿದ್ದರು.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆತಂಕಗಳ ಕುರಿತು ಆಡಳಿತ ಮಂಡಳಿ ಟ್ರಂಪ್ ಅವರಿಂದ ಭರವಸೆ ಕೇಳಿತ್ತು. ಪರಿಶೀಲನೆಯ ಬಳಿಕ ಯಾವುದೇ ಸಮಸ್ಯೆ ಇಲ್ಲವೆಂದು ಕಂಡುಬಂದಿದ್ದು, ಹುವಾಂಗ್ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಆಡಳಿತ ಮಂಡಳಿ ನಂಬಿದೆ ಎಂದು ಟ್ರಂಪ್ CNBCಗೆ ತಿಳಿಸಿದ್ದಾರೆ.

ನೈತಿಕತೆಯ ಉಲ್ಲಂಘನೆ ಮತ್ತು ಉದ್ಯೋಗಿಗಳೊಂದಿಗಿನ ಸಂಬಂಧಗಳ ಆರೋಪಗಳು ಹಾಗೂ ಚೀನಾದ ಗೂಢಾಚಾರಿಣಿ ಎಂದು ಶಂಕಿತಸಲಾದ ಆಲಿಸ್ ಹುವಾಂಗ್ ಜೊತೆಗಿನ ಸಂಪರ್ಕದ ಆರೋಪಗಳ ಹಿನ್ನೆಲೆಯಲ್ಲಿ ಹುವಾಂಗ್ ನಾನು ನ. 12ರಂದು CEO ಹುದ್ದೆಗೆ ರಾಜೀನಾಮೆ ನೀಡಿದ್ದರು.

ಹುವಾಂಗ್ ಮರುನೇಮಕದ ಸುದ್ದಿ ಹೊರಬಂದ ಬಳಿಕ Nvidia ಷೇರುಗಳು ಶೇ. 31ರಷ್ಟು ಏರಿಕೆ ಕಂಡಿದ್ದು, ಎರಡು ದಶಕಗಳಲ್ಲೇ ಅತಿದೊಡ್ಡ ಏಕದಿನ ಏರಿಕೆ ಕಂಡಿದೆ ಎಂದು ವರದಿಯಾಗಿದೆ. ಕಳೆದ ವಾರದ ಕುಸಿತದ ಬಳಿಕ AI ಷೇರುಗಳತ್ತ ಹೂಡಿಕೆದಾರರ ಆಸಕ್ತಿ ಹೆಚ್ಚಾಗಿದ್ದು, Nasdaq ಸೂಚ್ಯಂಕವೂ ಶೇ. 6ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಎಲಾನ್ ಮಸ್ಕ್ ಕೂಡ ಹುವಾಂಗ್ ಅವರ ಮರಳುವಿಕೆಯನ್ನು ಸ್ವಾಗತಿಸಿದ್ದು, Xನಲ್ಲಿ ‘ತಪ್ಪು ಸರಿಪಡಿಸಲಾಗಿದೆ’ ಎಂದು ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.