×
Ad

Afghanistan: ಟ್ರಕ್ ಅಪಘಾತದಲ್ಲಿ 10 ಮಕ್ಕಳು ಸೇರಿದಂತೆ 18 ಮಂದಿ ಮೃತ್ಯು

Update: 2026-05-30 21:43 IST

ಸಾಂದರ್ಭಿಕ ಚಿತ್ರ

ಜಲಾಲಾಬಾದ್,ಮೇ 30: ಪೂರ್ವ ಅಫ್ಘಾನಿಸ್ತಾನದಲ್ಲಿ ಶನಿವಾರ ಟ್ರಕ್ಕೊಂದು ಮಗುಚಿ ಬಿದ್ದು ಸಂಭವಿಸಿದ ಅವಘಡದಲ್ಲಿ 10 ಮಂದಿ ಮಕ್ಕಳು ಸೇರಿದಂತೆ ವಾಹನದಲ್ಲಿದ್ದ 18 ಮಂದಿ ಮೃತಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಈ ಕುಟುಂಬಗಳು ಅಫ್ಘಾನಿಸ್ತಾನಕ್ಕೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆಯೆಂದು ಲಾಗ್‌ಮಾನ್ ಪ್ರಾಂತದ ರಾಜ್ಯಪಾಲರ ವಕ್ತಾರ ಅಬ್ದುಲ್ ಮಲಿಕ್ ನಿಯಾಝೆಯ್ ಅವರು ತಿಳಿಸಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ನಗರವಾದ ಜಲಾಲಾಬಾದ್ ಹಾಗೂ ರಾಜಧಾನಿ ಕಾಬೂಲ್ ಮಧ್ಯೆ ಇರುವ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.

ಘಟನೆಯಲ್ಲಿ 10 ಮಂದಿ ಮಕ್ಕಳು, ಐವರು ಮಹಿಳೆಯರು ಹಾಗೂ ಮೂವರು ಪುರುಷರು ಮೃತಪಟ್ಟಿದ್ದಾರೆ ಹಾಗೂ ಇತರ 29 ಮಂದಿ ಗಾಯಗೊಂಡಿದ್ದಾರೆಂದು ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News