ವಿದ್ಯಾರ್ಥಿಯ ಬ್ಯಾಗ್‍ನಲ್ಲಿದ್ದ ಚಿಪ್ಸ್ ಪ್ಯಾಕೇಟನ್ನು ಗನ್ ಎಂದು ಗುರುತಿಸಿದ ಎಐ !
ಸಾಂದರ್ಭಿಕ ಚಿತ್ರ | Photo Credit : instagram.com
ನ್ಯೂಯಾರ್ಕ್, ಅ.25: ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದಲ್ಲಿರುವ ಬಾಲ್ಟಿಮೋರ್ ನಗರದ ಹೈಸ್ಕೂಲ್‍ನಲ್ಲಿ ಅಳವಡಿಸಲಾಗಿದ್ದ ಎಐ(ಕೃತಕ ಬುದ್ದಿಮತ್ತೆ) ಭದ್ರತಾ ವ್ಯವಸ್ಥೆಯ ದೋಷದಿಂದಾಗಿ ವಿದ್ಯಾರ್ಥಿಯೊಬ್ಬನಿಗೆ ಪೊಲೀಸರು ಕೈಕೋಳ ತೊಡಿಸಿದ ಘಟನೆ ವರದಿಯಾಗಿದೆ.
ಕೆನ್‍ವುಡ್ ಹೈಸ್ಕೂಲ್‍ನ ವಿದ್ಯಾರ್ಥಿ ಟಕಿ ಅಲೆನ್ ಎಂಬಾತ ಶಾಲೆಯ ಆವರಣದಲ್ಲಿ ಕುಳಿತಿದ್ದಾಗ ಏಕಾಏಕಿ ಪೊಲೀಸರು ಪಿಸ್ತೂಲ್ ಝಳಪಿಸುತ್ತಾ ಆತನನ್ನು ಸಮೀಪಿಸಿದ್ದು ನೆಲದಲ್ಲಿ ಮಲಗುವಂತೆ ಸೂಚಿಸಿದ್ದಾರೆ. ಬಳಿಕ ಆತನ ಕೈಗಳಿಗೆ ಕೋಳ ತೊಡಿಸಿದಾಗ ಅಲೆನ್ ಕಾರಣ ಕೇಳಿದ್ದಾನೆ. ಅದಕ್ಕೆ ಪೊಲೀಸರು `ಶಾಲೆಯ ಪ್ರವೇಶದ್ವಾರದಲ್ಲಿ ಅಳವಡಿಸಿರುವ ಎಐ ತಪಾಸಣಾ ವ್ಯವಸ್ಥೆಯಲ್ಲಿ ಅಲೆನ್ ಬ್ಯಾಗ್‍ನಲ್ಲಿ ಗನ್ ಪತ್ತೆಯಾಗಿದೆ' ಎಂದಿದ್ದಾರೆ. ಬಳಿಕ ಬ್ಯಾಗ್ ತಪಾಸಣೆ ನಡೆಸಿದಾಗ ಚಿಪ್ಸ್‍ನ ಪ್ಯಾಕೆಟ್ ಪತ್ತೆಯಾಗಿದ್ದು ಎಐ ವ್ಯವಸ್ಥೆಯಲ್ಲಿನ ದೋಷವು ಚಿಪ್ಸ್ ಪ್ಯಾಕೇಟನ್ನು ಗನ್ ಎಂದು ಗುರುತಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.