×
Ad

ಚೀನಾ ಪ್ರವಾಸದಿಂದ ಬ್ರಿಟನ್‌ ಗೆ ಪ್ರಯೋಜನ: ಸ್ಟಾರ್ಮರ್

Update: 2026-01-28 22:48 IST

Photo Credit : AP \ PTI

ಬೀಜಿಂಗ್, ಜ.28: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಮೂರು ದಿನಗಳ ಭೇಟಿಗಾಗಿ ಬುಧವಾರ ಚೀನಾಕ್ಕೆ ಆಗಮಿಸಿದ್ದು, ಈ ಪ್ರವಾಸವು ಬ್ರಿಟನ್‌ಗೆ ಪ್ರಯೋಜನಗಳನ್ನು ತರುತ್ತದೆ ಎಂದು ಹೇಳಿದ್ದಾರೆ.

ಸುಮಾರು ಎಂಟು ವರ್ಷಗಳ ಬಳಿಕ ಬ್ರಿಟನ್ ಪ್ರಧಾನಿಯೊಬ್ಬರು ಚೀನಾಕ್ಕೆ ಭೇಟಿ ನೀಡಿದ್ದು, ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಸ್ಟಾರ್ಮರ್ ಬಯಸಿದ್ದಾರೆ. ಈ ನಡುವೆ, ಮಂಗಳವಾರ ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿನ್‌ಪಿಂಗ್, ‘ವಿಶ್ವಸಂಸ್ಥೆ ಕೇಂದ್ರಸ್ಥಾನದಲ್ಲಿರುವ ಜಾಗತಿಕ ವ್ಯವಸ್ಥೆಯನ್ನು ದೃಢವಾಗಿ ಎತ್ತಿಹಿಡಿಯಲು ಇತರ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ’ ಎಂದು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.

ಕಳೆದ ವಾರ ಟ್ರಂಪ್ ಘೋಷಿಸಿರುವ ‘ಶಾಂತಿ ಮಂಡಳಿ’ ಮೂಲಕ ಅಮೆರಿಕಾ ಅಧ್ಯಕ್ಷರು ವಿಶ್ವಸಂಸ್ಥೆಗೆ ಪರ್ಯಾಯ ಜಾಗತಿಕ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಳವಳದ ನಡುವೆ ಜಿನ್‌ಪಿಂಗ್ ಈ ಹೇಳಿಕೆ ನೀಡಿದ್ದಾರೆ. ಶಾಂತಿ ಮಂಡಳಿಗೆ ಸೇರುವಂತೆ ಟ್ರಂಪ್ ನೀಡಿರುವ ಆಹ್ವಾನಕ್ಕೆ ಚೀನಾ ಇದುವರೆಗೆ ಪ್ರತಿಕ್ರಿಯಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News