×
Ad

ಲಿಬಿಯಾ ಬಳಿ ವಲಸಿಗರ ದೋಣಿಯಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತ್ಯು

Update: 2025-05-11 23:23 IST

ಅಥೆನ್ಸ್: ಲಿಬಿಯಾದಿಂದ ಇಟಲಿಗೆ ಸಮುದ್ರ ದಾಟುವ ಸ್ಥಳ(ಕ್ರಾಸಿಂಗ್)ದಲ್ಲಿ ವಲಸಿಗರ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳ ಸಹಿತ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು 59 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜರ್ಮನಿಯ ಸಮುದ್ರ ರಕ್ಷಣಾ ಸಂಸ್ಥೆ `ರೆಸ್ಕ್ಶಿಪ್'ನ ಮೂಲಗಳು ರವಿವಾರ ಹೇಳಿವೆ.

ರಬ್ಬರ್ ದೋಣಿಗಳಲ್ಲಿ ವಲಸಿಗರು ಇಟಲಿಯ ಲ್ಯಾಂಪೆಡುಸ ದ್ವೀಪದ ದಕ್ಷಿಣಾ ಭಾಗದತ್ತ ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿರುವುದನ್ನು ಯುರೋಪಿಯನ್ ಯೂನಿಯನ್ನ ಗಡಿ ಏಜೆನ್ಸಿ ಫ್ರಾಂಟೆಕ್ಸ್ನ ಕಣ್ಗಾವಲು ವಿಮಾನ ಶನಿವಾರ ಪತ್ತೆಹಚ್ಚಿದೆ. ಮಾಹಿತಿ ಪಡೆದ `ರೆಸ್ಕ್ಶಿಪ್'ನ ತಂಡ ದೋಣಿಯತ್ತ ತೆರಳಿದ್ದು ಅಷ್ಟರಲ್ಲೇ ದೋಣಿಯಲ್ಲಿದ್ದ ಮೂವರು ಹಸಿವು ಮತ್ತು ಬಾಯಾರಿಕೆಯಿಂದ ಮೃತಪಟ್ಟಿದ್ದರು. ಇತರ 59 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News