×
Ad

Tanzania: ಏರ್ ಲಿಫ್ಟ್ ರಕ್ಷಣಾ ಕಾರ್ಯಾಚರಣೆ ಸಂದರ್ಭ ಹೆಲಿಕಾಪ್ಟರ್ ಪತನ; 5 ಮೃತ್ಯು

Update: 2025-12-25 21:50 IST

ಸಾಂದರ್ಭಿಕ ಚಿತ್ರ | Photo Credit : freepik

ಡೊಡೊಮಾ, ಡಿ.25: ತಾಂಝಾನಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಆಫ್ರಿಕಾದ ಅತೀ ಎತ್ತರದ ಶಿಖರ ಕಿಲಿಮಂಜಾರೊ ಪರ್ವತದ ಮೇಲೆ ಪತನಗೊಂಡಿದ್ದು ಐದು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಅತ್ಯಂತ ಜನಪ್ರಿಯ ಚಾರಣ ಸ್ಥಳಗಳಲ್ಲಿ ಒಂದಾಗಿರುವ ಕಿಲಿಮಂಜಾರೊ ಪರ್ವತದಲ್ಲಿ ಸುಮಾರು 13,100 ಅಡಿಗಳ ಎತ್ತರದಲ್ಲಿರುವ ಸ್ಥಳದಲ್ಲಿ ಅಸ್ವಸ್ಥಗೊಂಡಿದ್ದ ಇಬ್ಬರು ಪರ್ವತಾರೋಹಿಯನ್ನು ಏರ್ ಲಿಫ್ಟ್ ಮೂಲಕ ಸ್ಥಳಾಂತರಿಸುವ ಕಾರ್ಯಾಚರಣೆ ಸಂದರ್ಭ ಹೆಲಿಕಾಪ್ಟರ್ ಪತನಗೊಂಡಿದೆ. ಇಬ್ಬರು ಅಸ್ವಸ್ಥ ಪರ್ವತಾರೋಹಿಗಳ ಸಹಿತ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News