ಬಹ್ರೇನ್ ನಲ್ಲಿರುವ ಅಮೆರಿಕದ ರಾಡಾರ್ ಮೇಲೆ ದಾಳಿ: IRGC ಹೇಳಿಕೆ
Photo: AP/PTI
ಟೆಹ್ರಾನ್: ಇರಾನ್ ನ ಸಿರಿಕ್ ನಲ್ಲಿರುವ ದೂರಸಂಪರ್ಕ ಗೋಪುರದ ಮೇಲೆ ನಡೆದ ದಾಳಿಗೆ ಪ್ರತಿಯಾಗಿ, ಬಹ್ರೇನ್ ನಲ್ಲಿರುವ ಅಮೆರಿಕದ ರಾಡಾರ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ಇರಾನಿನ ತಸ್ನಿಮ್ ಸುದ್ದಿ ಸಂಸ್ಥೆ ಯನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕದ ವೈಮಾನಿಕ ಪ್ರಚೋದನೆಗಳು ಮತ್ತು ತೈಲ ಕಳ್ಳಸಾಗಣೆಯನ್ನು ನಿಲ್ಲಿಸುವಂತೆ, ಆಕ್ರಮಣಕಾರಿ ಶತ್ರುಗಳಿಗೆ ಗಂಭೀರ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು IRGC ತಿಳಿಸಿದೆ.
"ಈ ಉಲ್ಲಂಘನೆಗಳು ಮತ್ತು ಆಕ್ರಮಣಕಾರಿ ಕೃತ್ಯಗಳು ಮತ್ತೆ ಮರುಕಳಿಸಿದರೆ, IRGCಯ ಏರೋಸ್ಪೇಸ್ ಪಡೆ ಯಾವುದೇ ಮಿತಿಯಿಲ್ಲದೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಸಂಪೂರ್ಣ ಸಿದ್ಧವಾಗಿದೆ" ಎಂದು ಇರಾನ್ ತಿಳಿಸಿದೆ.