ಚೆಂಡು ಈಗ ಅಮೆರಿಕದ ಅಂಗಳದಲ್ಲಿದೆ; 7 ಷರತ್ತುಗಳನ್ನು ಪೂರೈಸದೆ ಮಾತುಕತೆ ಇಲ್ಲ: ಇರಾನ್
ಮೊಹಮ್ಮದ್ ಬಾಘರ್ ಗಾಲಿಬಾಫ್ | Photo Credit : aljazeera.com
ಟೆಹರಾನ್: ಇರಾನ್‍ನೊಂದಿಗೆ ಮಾತುಕತೆಯಲ್ಲಿ ಮುಂದಿನ ಹೆಜ್ಜೆ ಇಡುವ ಜವಾಬ್ದಾರಿ ಈಗ ಅಮೆರಿಕದ ಮೇಲಿದೆ ಎಂದು ಇರಾನ್‍ನ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಗಾಲಿಬಾಫ್ ಹೇಳಿದ್ದು, ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಲು ಮತ್ತು ಮಾತುಕತೆಗಳನ್ನು ಪುನರಾರಂಭಿಸಲು ಅಮೆರಿಕವು ಇರಾನ್‍ನ ಏಳು ಷರತ್ತುಗಳನ್ನು ಪೂರೈಸಲೇಬೇಕು ಎಂದು ಹೇಳಿದ್ದಾರೆ.
ಇರಾನ್ ಈಗಾಗಲೇ ತನ್ನ ಷರತ್ತುಗಳನ್ನು ಅಮೆರಿಕಕ್ಕೆ ತಿಳಿಸಿದೆ, ಆದರೆ ಇನ್ನೂ ಅಧಿಕೃತ ಮತ್ತು ನಿರ್ದಿಷ್ಟ ಪ್ರತಿಕ್ರಿಯೆ ಬಂದಿಲ್ಲ. ಚೆಂಡು ಈಗ ಅಮೆರಿಕನ್ನರ ಅಂಗಳದಲ್ಲಿದೆ, ಅವರು ನಿರ್ಧಾರ ತೆಗೆದುಕೊಂಡು ಅದನ್ನು ಘೋಷಿಸಬೇಕು ಎಂದು ಗಾಲಿಬಾಫ್ ಹೇಳಿದ್ದು ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತೆ ಯುದ್ಧಕ್ಕೆ ಹೋಗಲು ನಿರ್ಧರಿಸಿದರೆ, ಅವರು ಮತ್ತೊಂದು ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.