ಜೆ.ಡಿ. ವ್ಯಾನ್ಸ್ | Photo Credit : PTI 

ನ್ಯೂಯಾರ್ಕ್: ಇರಾನ್‍ನೊಂದಿಗಿನ ಯುದ್ಧದಿಂದ ಹೊರಬರುವ ಮಾರ್ಗವನ್ನು ಅಮೆರಿಕ ಹುಡುಕುತ್ತಿರುವ ಬೆನ್ನಲ್ಲೇ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಇರಾನ್‍ನ ಹಿರಿಯ ಭದ್ರತಾ ಅಧಿಕಾರಿಯೊಂದಿಗೆ ಮಾತುಕತೆ ನಡೆಸಲು ಚಿಂತನೆ ನಡೆಸುತ್ತಿದ್ದಾರೆ ಎಂದು `ವಾಲ್ ಸ್ಟ್ರೀಟ್ ಜರ್ನಲ್' (ಡಬ್ಲ್ಯೂಎಸ್‍ಜೆ) ವರದಿ ಮಾಡಿದೆ.

ವರದಿಯ ಪ್ರಕಾರ, ಇರಾನ್‍ನೊಂದಿಗೆ ನವೀಕೃತ ಮಾತುಕತೆಗಳನ್ನು ಮುನ್ನಡೆಸಲು ವ್ಯಾನ್ಸ್ ಅವರಿಗೆ ಅವಕಾಶ ನೀಡಲು ತಾವು ಮುಕ್ತವಾಗಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ನಾಯಕರಿಗೆ ತಿಳಿಸಿದ್ದಾರೆ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಲು ಉಪಾಧ್ಯಕ್ಷರಿಗೆ ಅಧಿಕಾರ ನೀಡಿದ್ದಾರೆ. ಮುಂದಿನ ಹೆಜ್ಜೆಗಳ ಕುರಿತು ಅಮೆರಿಕ ಮತ್ತು ಇರಾನ್ ಮಧ್ಯವರ್ತಿಗಳು ಹಾಗೂ ಪ್ರಾದೇಶಿಕ ಮಿತ್ರರಾಷ್ಟ್ರಗಳ ಮೂಲಕ ಸಂವಹನ ನಡೆಸುತ್ತಿವೆ, ಆದರೆ ಇದುವರೆಗೆ ಯಾವುದೇ ಅಧಿಕೃತ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

ಇರಾನ್‍ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜಾಯ್ ಅವರಿಗೆ ವ್ಯಾನ್ಸ್ ಅಕ್ಟೋಬರ್‌ನಲ್ಲಿ ಪತ್ರ ಬರೆದು ಭೇಟಿಗೆ ಮನವಿ ಮಾಡಿದ್ದರು ಎಂದು `ಡಬ್ಲ್ಯೂಎಸ್‍ಜೆ' ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor