×
Ad

ಬ್ರಿಟನ್ | ಗಲಭೆ ಹತ್ತಿಕ್ಕಲು 6000 ಪೊಲೀಸರು ಸನ್ನದ್ಧ ; ವರದಿ

Update: 2024-08-06 22:10 IST

PC : timesofindia

ಲಂಡನ್ : ಮೂವರು ಎಳೆಯ ಮಕ್ಕಳ ಹತ್ಯೆಯ ಬಳಿಕ ಬ್ರಿಟನ್‍ನಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತು ಗಲಭೆಯನ್ನು ಹತ್ತಿಕ್ಕಲು 6000 ವಿಶೇಷ ಪೊಲೀಸ್ ಅಧಿಕಾರಿಗಳ ತಂಡವನ್ನು ಸನ್ನದ್ಧಗೊಳಿಸಿರುವುದಾಗಿ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದಕ್ಷಿಣ ಇಂಗ್ಲೆಂಡ್‍ನ ಪ್ಲೈಮೌತ್ ನಗರದಲ್ಲಿ ಗಲಭೆಕೋರರು ಇಟ್ಟಿಗೆ ಮತ್ತು ಪಟಾಕಿಗಳನ್ನು ಪೊಲೀಸರತ್ತ ಎಸೆದಾಗ ಹಲವು ಅಧಿಕಾರಿಗಳು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ 6 ಮಂದಿಯನ್ನು ಬಂಧಿಸಲಾಗಿದೆ. ಉತ್ತರ ಐರ್ಲೆಂಡ್‍ನ ಬೆಲ್‍ಫಾಸ್ಟ್‍ನಲ್ಲಿ ವಿದೇಶಿ ಪ್ರಜೆಯೊಬ್ಬರ ಮಾಲಿಕತ್ವದ ಅಂಗಡಿಯೊಂದರ ಮೇಲೆ ದಾಳಿಗೆ ಯತ್ನಿಸಿದ ಗುಂಪನ್ನು ಪೊಲೀಸರು ಚದುರಿಸಿದ್ದಾರೆ. ಈ ಸಂದರ್ಭ ಓರ್ವ ವ್ಯಕ್ತಿ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಲವು ಅಂಗಡಿ ಹಾಗೂ ವಾಹನಗಳಿಗೆ ಹಾನಿಯಾಗಿದೆ. ಗಲಭೆಗೆ ಸಂಬಂಧಿಸಿ ಇದುವರೆಗೆ 378 ಮಂದಿಯನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ಪೊಲೀಸ್ ಅಧಿಕಾರಿಗಳ ಸಮಿತಿ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News