×
Ad

ಇರಾನ್‌ನ ನೂತನ ಸರ್ವೋಚ್ಚ ನಾಯಕನನ್ನು ಗುರಿಯಾಗಿಸುವುದನ್ನು ವಿರೋಧಿಸುತ್ತೇವೆ: ಇಸ್ರೇಲ್ ಬೆದರಿಕೆ ಬೆನ್ನಲ್ಲೆ ಚೀನಾ ಎಚ್ಚರಿಕೆ........

Update: 2026-03-09 15:54 IST

ಮೊಜ್ತಬಾ ಖಾಮಿನೈ (Photo: PTI)

ಬೀಜಿಂಗ್ : ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಾಮಿನೈ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಯಾವುದೇ ಪ್ರಯತ್ನವನ್ನು ವಿರೋಧಿಸುವುದಾಗಿ ಚೀನಾ ಹೇಳಿದೆ.

ಆಯತುಲ್ಲಾ ಖಾಮಿನೈ ಅವರ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಯಾರು ಆಯ್ಕೆಯಾದರೂ ಅವರನ್ನು ಹತ್ಯೆಗೈಯುವುದಾಗಿ ಇಸ್ರೇಲ್ ಬೆದರಿಕೆ ಹಾಕಿತ್ತು. ಇದರ ಬೆನ್ನಲ್ಲೆ ಹೇಳಿಕೆ ನೀಡಿರುವ ಚೀನಾ, ಮೊಜ್ತಬಾ ಖಾಮಿನೈ ಅವರನ್ನು ಇರಾನ್‌ನ ಸರ್ವೋಚ್ಚ ನಾಯಕನನ್ನಾಗಿ ನೇಮಕ ಮಾಡಿರುವುದು ಇರಾನ್‌ನ ಆಂತರಿಕ ವಿಷಯವಾಗಿದೆ ಎಂದು ಹೇಳಿದೆ.

ಇರಾನ್ ದೇಶದ ಸಾರ್ವಭೌಮತ್ವವನ್ನು ಗೌರವಿಸುವಂತೆ ಆಗ್ರಹಿಸಿದ ಚೀನಾ, ಇತರ ದೇಶಗಳು ಇರಾನ್‌ನ ದೇಶೀಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News