×
Ad

ಇರಾನ್‌ ನ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಅಲಿ ಖಾಮಿನೈರ 2ನೇ ಪುತ್ರ ಮೊಜ್ತಬಾ ಆಯ್ಕೆ

Update: 2026-03-09 05:55 IST

ಮೊಜ್ತಬಾ ಖಾಮಿನೈ | Photo Credit : AP , PTI  

ಟೆಹ್ರಾನ್: ಆಯತುಲ್ಲಾ ಅಲಿ ಖಾಮಿನೈ ಅವರ ಎಡನೇ ಪುತ್ರ ಮೊಜ್ತಬಾ ಖಾಮಿನೈ ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಇರಾನ್‌ ದೇಶದ ಮಾಧ್ಯಮಗಳನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ.

ಅಮೆರಿಕ ಹಾಗೂ ಇಸ್ರೇಲ್, ಇರಾನ್ ಮೇಲೆ ನಡೆಸಿದ ಯುದ್ಧದ ಮೊದಲ ದಿನವೇ ಸರ್ವೋಚ್ಚ ನಾಯಕರಾಗಿದ್ದ ಆಯತುಲ್ಲಾ ಅಲಿ ಖಾಮಿನೈ ಅವರು ಮೃತಪಟ್ಟಿದ್ದರು.

56 ವರ್ಷದ ಧರ್ಮಗುರು ಆಗಿರುವ ಮೊಜ್ತಬಾ ಖಾಮಿನೈ, ಇರಾನ್‌ ನ ಧಾರ್ಮಿಕ ಮತ್ತು ರಾಜಕೀಯ ವಲಯಗಳಲ್ಲಿ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಾಮಿನೈ ಅವರ ತಂದೆ ಆಯತುಲ್ಲಾ ಅಲಿ ಖಾಮಿನೈ ಅವರ ಜೊತೆಗೆ ಅವರ ತಾಯಿ, ಪತ್ನಿ ಮತ್ತು ಸಹೋದರಿಯೊಬ್ಬರು ಮೃತಪಟ್ಟಿದ್ದರು.

ದಾಳಿಯ ವೇಳೆ ಮೊಜ್ತಬಾ ಖಾಮಿನೈ ಅವರು ಆ ಸ್ಥಳದಲ್ಲಿಲ್ಲದ ಕಾರಣ ಪಾರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News