×
Ad

ಎಂಜಿನ್ ನಲ್ಲಿ ಬೆಂಕಿ: ಸಿಂಗಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಚೀನಾ ವಿಮಾನ

ವಿಮಾನದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಏರ್ ಚೀನಾ ವಿಮಾನವು ಸಿಂಗಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿದ್ದ 155 ಪ್ರಯಾಣಿಕರ ಪೈಕಿ ಒಂಬತ್ತು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Update: 2023-09-10 19:39 IST

PHOTO : twitter.com/FATIIIAviation

ಸಿಂಗಾಪುರ: ವಿಮಾನದ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಏರ್ ಚೀನಾ ವಿಮಾನವು ಸಿಂಗಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿದ್ದ 155 ಪ್ರಯಾಣಿಕರ ಪೈಕಿ ಒಂಬತ್ತು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಆಗ್ನೇಯ ಚೀನಾದ ಚೆಂಗ್ಡು ನಗರದಿಂದ ರಾಜ್ಯ ರಾಜಧಾನಿಯಾದ ಚಾಂಗಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನ ಸಂಖ್ಯೆ ಸಿಎ403 ವಿಮಾನದ ಸರಕು ಕೋಣೆ ಹಾಗೂ ಶೌಚಾಲಯದ ಬಳಿ ಹೊಗೆ ಕಾಣಿಸಿಕೊಂಡಿತು ಎಂದು ಫೇಸ್ ಬುಕ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಮಾನವು ಸುಮಾರು 4.15 ಗಂಟೆಗೆ ಭೂಸ್ಪರ್ಶ ಮಾಡಿತು ಹಾಗೂ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಪಾರು ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

 “ಎಡ ಎಂಜಿನ್ ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲಾಯಿತು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಮಾನದಲ್ಲಿ 146 ಪ್ರಯಾಣಿಕರು ಹಾಗೂ ಒಂಬತ್ತು ಮಂದಿ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು ಎಂದು ಸಿಂಗಾಪುರ ನಾಗರಿಕ ವಿಮಾನ ಯಾನ ಪ್ರಾಧಿಕಾರ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News