×
Ad

ಇರಾನ್: ಸ್ಫೋಟದಲ್ಲಿ ಮೃತರ ಸಂಖ್ಯೆ 25ಕ್ಕೆ ಏರಿಕೆ; 800 ಮಂದಿಗೆ ಗಾಯ

Update: 2025-04-27 23:31 IST

PC: x.com/TehranTimes

ಟೆಹ್ರಾನ್: ದಕ್ಷಿಣ ಇರಾನ್ನ ಬಂದರ್ ಅಬ್ಬಾಸ್ ನಗರದ ಬಂದರಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿದ್ದು ಸುಮಾರು 800 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಶನಿವಾರ ಬೆಳಿಗ್ಗೆ ಹೊರ್ಮುಝ್ ಕೊಲ್ಲಿಯ ಬಳಿಯಿರುವ ಶಾಹಿದ್ ರಾಜೈ ಬಂದರಿನಲ್ಲಿ ನಡೆದ ಪ್ರಬಲ ಸ್ಫೋಟದ ತೀವ್ರತೆಗೆ ಸಮೀಪದ ಕಚೇರಿ ಕಟ್ಟಡದ ಕಿಟಕಿ ಬಾಗಿಲುಗಳು ಹಾರಿ ಹೋಗಿದ್ದು ಹಲವು ಕಟ್ಟಡಗಳು ನೆಲಸಮಗೊಂಡಿವೆ. ಸ್ಫೋಟ ಸಂಭವಿಸಿದ ಬಳಿಕ ಬಂದರಿನಲ್ಲಿ ಹರಡಿದ್ದ ಬೆಂಕಿಯ ಜ್ವಾಲೆಯನ್ನು ಬಹುತೇಕ ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಂದರಿನ ವಾರ್ಫ್(ಸರಕು ಕಟ್ಟೆ)ಯಲ್ಲಿ ಕಾಣಿಸಿಕೊಂಡ ಬೆಂಕಿ ಅಲ್ಲಿಯೇ ಸಮೀಪ ದಹನಕಾರೀ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಟ್ಯಾಂಕ್ಗಳಿಗೆ ಹರಡಿ ಸ್ಫೋಟ ಸಂಭವಿಸಿದೆ. ರಾಸಾಯನಿಕ ವಸ್ತುಗಳನ್ನು ಇರಿಸಿದ್ದ ಹಲವು ಟ್ಯಾಂಕ್ಗಳು ಸ್ಫೋಟಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News