ಡೊನಾಲ್ಡ್ ಟ್ರಂಪ್ | Photo Credit : PTI  

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಮೂರು ಪ್ರಮುಖ ವಿಭಾಗಗಳಲ್ಲೂ ರಿಪಬ್ಲಿಕನ್ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಸೆನೆಟ್, ಪ್ರತಿನಿಧಿ ಸಭೆ(House of Representatives) ಹಾಗೂ ಗವರ್ನರ್ ಚುನಾವಣೆಗಳ ಫಲಿತಾಂಶದಲ್ಲಿ ಡೆಮಾಕ್ರಟಿಕ್ ಪಕ್ಷ ಮೇಲುಗೈ ಸಾಧಿಸಿದೆ.

ದಿ ಅಸೋಸಿಯೇಟೆಡ್ ಪ್ರೆಸ್ (AP) ಬಿಡುಗಡೆ ಮಾಡಿರುವ ಫಲಿತಾಂಶಗಳ ಪ್ರಕಾರ, ಭಾರತೀಯ ಕಾಲಮಾನ ಬೆಳಿಗ್ಗೆ 11.19ರ ವೇಳೆಗೆ ಸೆನೆಟ್‌ ನಲ್ಲಿ ಡೆಮಾಕ್ರಟಿಕ್ ಪಕ್ಷ 52 ಸ್ಥಾನಗಳನ್ನು ಪಡೆದಿದ್ದರೆ, ರಿಪಬ್ಲಿಕನ್ ಪಕ್ಷ 41 ಸ್ಥಾನಗಳನ್ನು ಗಳಿಸಿದೆ. ಹಿಂದಿನ ಚುನಾವಣೆಗಿಂತ ಡೆಮಾಕ್ರಟಿಕ್ ಪಕ್ಷ ಆರು ಸ್ಥಾನಗಳನ್ನು ಹೆಚ್ಚುವರಿಯಾಗಿ ತನ್ನದಾಗಿಸಿಕೊಂಡಿದೆ. ರಿಪಬ್ಲಿಕನ್ ಪಕ್ಷ ಅಷ್ಟೇ ಸಂಖ್ಯೆಯ ಸ್ಥಾನಗಳನ್ನು ಕಳೆದುಕೊಂಡಿದೆ.

ಡೆಮಾಕ್ರಟಿಕ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಇಬ್ಬರು ಪಕ್ಷೇತರರೂ ಇದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲೂ ಡೆಮಾಕ್ರಟಿಕ್ ಪಕ್ಷದ ಬಲವರ್ಧನೆ

ಅಮೆರಿಕದ ಪ್ರತಿನಿಧಿ ಸಭೆ(House of Representatives) ಯ ಚುನಾವಣೆಯಲ್ಲಿಯೂ ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸಿದೆ. ಪಕ್ಷವು 204 ಸ್ಥಾನಗಳನ್ನು ಪಡೆದಿದ್ದರೆ, ರಿಪಬ್ಲಿಕನ್ ಪಕ್ಷ 123 ಸ್ಥಾನಗಳನ್ನು ಗೆದ್ದಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಡೆಮಾಕ್ರಟಿಕ್ ಪಕ್ಷಕ್ಕೆ 22 ಸ್ಥಾನಗಳು ಹೆಚ್ಚುವರಿಯಾಗಿ ಲಭಿಸಿವೆ. ರಿಪಬ್ಲಿಕನ್ ಪಕ್ಷ 22 ಸ್ಥಾನಗಳನ್ನು ಕಳೆದುಕೊಂಡಿದೆ. ಪ್ರತಿನಿಧಿ ಸಭೆ(House of Representatives)ಯಲ್ಲಿ ಬಹುಮತ ಪಡೆಯಲು 218 ಸ್ಥಾನಗಳ ಅಗತ್ಯವಿದೆ.

ಗವರ್ನರ್ ಚುನಾವಣೆಗಳಲ್ಲೂ ಮೇಲುಗೈ

ಗವರ್ನರ್ ಚುನಾವಣೆಗಳ ಫಲಿತಾಂಶವೂ ಡೆಮಾಕ್ರಟಿಕ್ ಪಕ್ಷದ ಪರವಾಗಿದೆ. ಪಕ್ಷವು 24 ಗವರ್ನರ್ ಸ್ಥಾನಗಳನ್ನು ಗೆದ್ದಿದ್ದರೆ, ರಿಪಬ್ಲಿಕನ್ ಪಕ್ಷ 18 ಸ್ಥಾನಗಳನ್ನು ಪಡೆದಿದೆ. ಹಿಂದಿನ ಚುನಾವಣೆಗಿಂತ ಡೆಮಾಕ್ರಟಿಕ್ ಪಕ್ಷ ನಾಲ್ಕು ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದೆ. ರಿಪಬ್ಲಿಕನ್ ಪಕ್ಷ ನಾಲ್ಕು ಸ್ಥಾನಗಳನ್ನು ಕಳೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor