ಶತಕೋಟ್ಯಾಧಿಪತಿಗಳ ಹಿಡಿತದಿಂದ ವ್ಯವಸ್ಥೆ ಮುಕ್ತವಾಗಬೇಕು: ಅಲ್-ಸಯೀದ್
ಅಬ್ದುಲ್ ಅಲ್-ಸಯೀದ್ (Photo: India Today)
ಮಿಷಿಗನ್: ಅಮೆರಿಕದ ವ್ಯವಸ್ಥೆಯನ್ನು ದೊಡ್ಡ ನಿಗಮಗಳು ಮತ್ತು ಶತಕೋಟ್ಯಾಧಿಪತಿಗಳು ತಮ್ಮ ಸ್ವಾರ್ಥ ಹಾಗೂ ಅನುಕೂಲಕ್ಕೆ ತಕ್ಕಂತೆ ತಿರುಚಿದ್ದಾರೆ. ಇಂತಹ ಹಿತಾಸಕ್ತಿಗಳ ವಿರುದ್ಧ ಹೋರಾಡಬೇಕಿದೆ ಎಂದು ಮಿಷಿಗನ್ ನ ಡೆಮಾಕ್ರಟಿಕ್ ಪಕ್ಷದ ಸೆನೆಟ್ ಅಭ್ಯರ್ಥಿ ಅಬ್ದುಲ್ ಅಲ್-ಸಯೀದ್ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಮಿಷಿಗನ್ ನಲ್ಲಿ ನಡೆದ ತೀವ್ರ ಪೈಪೋಟಿಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿದ ಬಳಿಕ ಮಾತನಾಡಿದ ಅವರು, ದೇಶದ ಭವಿಷ್ಯದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದರು.
"ನಾವು ಮತ್ತೆ 'ಮಹಾನ್' ಆಗುವ ಅಗತ್ಯವಿಲ್ಲ. ಬದಲಾಗಿ, ನಮ್ಮಲ್ಲಿ ಯಾವಾಗಲೂ ಇದ್ದ ಮಹಾನ್ ಗುಣವನ್ನು ಅಪ್ಪಿಕೊಳ್ಳಬೇಕು. ಅಂದರೆ, ನಮ್ಮನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ಛಲವನ್ನು ಬೆಳೆಸಿಕೊಳ್ಳಬೇಕು" ಎಂದು ಹೇಳಿದರು.
"ನಮ್ಮ ವಿರುದ್ಧವಾಗಿ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿರುವ ನಿಗಮಗಳು ಮತ್ತು ಶತಕೋಟ್ಯಾಧಿಪತಿಗಳ ಸ್ವಾರ್ಥ ಹಿತಾಸಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ" ಎಂದು ಅಲ್-ಸಯೀದ್ ಹೇಳಿದರು.