ಲಿಥುವೇನಿಯಾದಲ್ಲಿ DHL ಸರಕು ಸಾಗಣೆ ವಿಮಾನ ಪತನ
Update: 2024-11-25 12:08 IST
Photo credit: X/@runews
ವಿಲ್ನಿಯಸ್: ಡಿಎಚ್ಎಲ್ ಸರಕು ಸಾಗಣೆ ವಿಮಾನವು ಯುರೋಪ್ ನ ಲಿಥುವೇನಿಯಾದ ರಾಜಧಾನಿ ಬಳಿ ಸೋಮವಾರ ಬೆಳಿಗ್ಗೆ ಪತನಗೊಂಡಿದೆ.
ಲಿಥುವೇನಿಯನ್ ವಿಮಾನ ನಿಲ್ದಾಣ ಪ್ರಾಧಿಕಾರವು ಪತನವಾದ ವಿಮಾನವನ್ನು ಜರ್ಮನಿಯ ಲೀಪ್ ಜಿಗ್ನಿಂದ ವಿಲ್ನಿಯಸ್ ವಿಮಾನ ನಿಲ್ದಾಣಕ್ಕೆ ಹಾರುತ್ತಿದ್ದ DHL ಸರಕು ವಿಮಾನ ಎಂದು ಗುರುತಿಸಿದೆ.
ಜರ್ಮನಿಯ ಬಾನ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ DHL ಗ್ರೂಪ್ ಈ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.