×
Ad

ಶ್ವೇತಭವನದ ಗೇಟ್ ಗೆ ಕಾರು ಡಿಕ್ಕಿ: ಚಾಲಕ ಬಂಧನ

Update: 2024-01-09 23:51 IST

Photo : twitter

ವಾಷಿಂಗ್ಟನ್: ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷೀಯ ಭವನದ ಸಂಕೀರ್ಣದ ಹೊರಗೇಟ್ ಗೆ ವಾಹನವನ್ನು ಡಿಕ್ಕಿ ಹೊಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಮೆರಿಕದ ಗುಪ್ತಚರ ಸೇವೆ ಇಲಾಖೆ ಹೇಳಿದೆ.

ಘಟನೆ ನಡೆದಾಗ ಅಧ್ಯಕ್ಷ ಜೋ ಬೈಡನ್ ನಗರದಲ್ಲಿ ಇರಲಿಲ್ಲ. ಇದು ಆಕಸ್ಮಿಕವಾಗಿ ನಡೆದಿರುವ ಘಟನೆಯೇ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂಬುದು ಸ್ಪಷ್ಟವಾಗಿಲ್ಲ. ಚಾಲಕನನ್ನು ಬಂಧಿಸಿದ್ದು ಘಟನೆಗೆ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗುಪ್ತಚರ ಸೇವಾ ಇಲಾಖೆಯ ವಕ್ತಾರ ಆಂಥೊನಿ ಗ್ಯುಗಿಲಿಯೆಮಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News