ಎಲ್ ನಿನೋ| ಇಕ್ವೆಡಾರ್ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಸಾಂದರ್ಭಿಕ ಚಿತ್ರ | Photo Credit : AP
ಕ್ವಿಟೊ: ಎಲ್ ನಿನೋ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಬಾರಿಯ ಎಲ್ ನಿನೋ ಇತಿಹಾಸದಲ್ಲೇ ಅತ್ಯಂತ ತೀವ್ರವಾಗಿರಲಿದೆ ಎಂದು ಇಕ್ವೆಡಾರ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಎಲ್ ನಿನೋ ಈಗಾಗಲೇ ಮಧ್ಯ ಅಮೆರಿಕದಲ್ಲಿ ತೀವ್ರ ಬರಗಾಲಕ್ಕೆ ಕಾರಣವಾಗಿದೆ ಮತ್ತು ಇಂಡೋನೇಷ್ಯಾದಲ್ಲಿ ಕಾಡ್ಗಿಚ್ಚು ಹೆಚ್ಚಾಗಲು ಕಾರಣವಾಗಿದೆ. ವರ್ಷದ ಅಂತ್ಯದ ವೇಳೆಗೆ ಪ್ರಸ್ತುತ ಎಲ್ ನಿನೋ ತನ್ನ ಗರಿಷ್ಠ ಹಂತ ತಲುಪಲಿದ್ದು, 2027 ರಲ್ಲಿ ದಾಖಲೆ ಮಟ್ಟದ ಜಾಗತಿಕ ತಾಪಮಾನಕ್ಕೆ ಕಾರಣವಾಗಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.
ಇಕ್ವಡಾರ್ ದೇಶದ ಪೂರ್ವ ಭಾಗದಲ್ಲಿರುವ ಅಮೆಜಾನ್ ಪ್ರದೇಶದಲ್ಲಿ ಬರಗಾಲ ಮತ್ತು ಕಾಡ್ಗಿಚ್ಚಿನ ಸಾಧ್ಯತೆ ಗರಿಷ್ಠವಾಗಿದೆ ಎಂದು ದೇಶದ ಅಪಾಯ ನಿರ್ವಹಣಾ ಸಚಿವಾಲಯವು ಎಚ್ಚರಿಸಿದೆ.
ಪನಾಮಾ, ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ ದೇಶಗಳು ಈಗಾಗಲೇ ಎಲ್ ನಿನೋ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿವೆ.