ಡೊನಾಲ್ಡ್ ಟ್ರಂಪ್ | Photo Credit : PTI

ವಾಶಿಂಗ್ಟನ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿರುದ್ಧ ಹಾಗೂ ಇತರ ರಾಜಕೀಯ ವಿಷಯಗಳ ಬಗ್ಗೆ ಟೀಕಾತ್ಮಕ ಅಭಿಪ್ರಾಯ ಹೊಂದಿರುವ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡಲು ಯತ್ನಿಸುವ ಮೂಲಕ ಟ್ರಂಪ್ ಆಡಳಿತವು ಸಂವಿಧಾನಬದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಗಡೀಪಾರು ಪ್ರಕ್ರಿಯೆಯಲ್ಲಿ ಫೆಡರಲ್ ಅಧಿಕಾರಿಗಳು ಬಳಸಿದ್ದ ಕೆಲ ನಿಬಂಧನೆಗಳನ್ನು ವಜಾಗೊಳಿಸಿದ ನ್ಯಾಯಾಧೀಶರು, ಸರಕಾರದ ಈ ಕ್ರಮಗಳು ಮೊದಲ ಮತ್ತು ಐದನೇ ಸಂವಿಧಾನ ತಿದ್ದುಪಡಿಯ ಹಕ್ಕುಗಳ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಗಳು ಅಮೆರಿಕಾದ ಅಖಂಡ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯಗಳಾಗಿವೆ ಎಂದು ಹೇಳಿದರು.

ಈ ತೀರ್ಪು ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪತ್ರಿಕೆಗೆ ದೊರೆತ ಜಯವಾಗಿದೆ. ಆಡಳಿತದ ಗಡೀಪಾರು ಪ್ರಯತ್ನಗಳು ಧ್ವನಿ ಎತ್ತಲು ಬಯಸಿದ್ದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ ಎಂದು ಈ ಪತ್ರಿಕೆ ವಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor