ಅಮೆರಿಕನ್ನರು ದೈಹಿಕ ಸವಾಲಿನ ಕೆಲಸ ಮಾಡಲು ಸಾಧ್ಯವಿಲ್ಲ: ಎಲಾನ್ ಮಸ್ಕ್
Update: 2025-11-17 22:22 IST
ಎಲಾನ್ ಮಸ್ಕ್ | Photo Credit : PTI
ವಾಷಿಂಗ್ಟನ್, ನ.17: ಅಮೆರಿಕಾದಲ್ಲಿ ದೈಹಿಕ ಶ್ರಮವನ್ನು ಬೇಡುವ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯವಿರುವ ವ್ಯಕ್ತಿಗಳ ಗಮನಾರ್ಹ ಕೊರತೆಯಿದೆ ಎಂದು ಹೇಳಿರುವ ಎಲಾನ್ ಮಸ್ಕ್ , ಎಚ್-1ಬಿ ವೀಸಾದ ಕುರಿತ ಚರ್ಚೆ ನಡೆಯುತ್ತಿರುವ ನಡುವೆಯೇ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಅಮೆರಿಕನ್ನರು ಸಾಮಾನ್ಯವಾಗಿ ಇಂತಹ ಕೆಲಸಗಳಿಗೆ ತರಬೇತಿ ಪಡೆಯಲು ಬಯಸುವುದಿಲ್ಲ ಎಂದು ಮಸ್ಕ್ ಸಾಮಾಜಿಕ ಮಾಧ್ಯಮ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋರ್ಡ್ ಕಂಪನಿಯು 5000 ಮೆಕ್ಯಾನಿಕಲ್ ಹುದ್ದೆಗೆ ಭರ್ತಿ ಮಾಡಿಕೊಳ್ಳಲು ಕಷ್ಟಪಡುತ್ತಿದೆ ಎಂದು ಫೋರ್ಡ್ ಸಿಇಒ ಜಿಮ್ ಫಾರ್ಲೆ ಇತ್ತೀಚೆಗೆ ಹೇಳಿಕೆ ನೀಡಿದ್ದರು.