ನೆರವು ಸಾಮಾಗ್ರಿಗಳೊಂದಿಗೆ ಹಡಗಿನಲ್ಲಿ ಗಾಝಾಕ್ಕೆ ಹೊರಟ ಪರಿಸರವಾದಿ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್
ಹಡಗಿನಲ್ಲಿ ಗಾಝಾಕ್ಕೆ ಹೊರಟ ಪರಿಸರವಾದಿ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ | Photo: instagram.com/gretathunberg
ಜೆರುಸೆಲೆಂ: ಸ್ವೀಡನ್ ನ ಪರಿಸರವಾದಿ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ ಸೇರಿದಂತೆ 12 ಜನ ಕಾರ್ಯಕರ್ತರು ಮಾನವೀಯ ನೆರವು ಸಾಮಾಗ್ರಿಗಳನ್ನು ಹೊತ್ತ ಹಡಗಿನಲ್ಲಿ ಗಾಝಾದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಜೂನ್ 7ರಂದು ಅವರು ಗಾಝಾ ಕರಾವಳಿ ತೀರವನ್ನು ತಲುಪಲಿದ್ದಾರೆ ಎಂದು ವರದಿಯಾಗಿದೆ.
‘ಏನೇ ಸಮಸ್ಯೆ ಬಂದರೂ ನಾವು ಗಾಝಾಕ್ಕೆ ತೆರಳುವುದನ್ನು ನಿಲ್ಲಿಸುವುದಿಲ್ಲ. ನಮ್ಮ ಪ್ರಯತ್ನ ನಿರಂತರ. ಪ್ರಯತ್ನವನ್ನು ನಿಲ್ಲಿಸಿದ ಕ್ಷಣದಲ್ಲಿಯೇ ನಾವು ಮಾನವೀಯತೆ ಕಳೆದುಕೊಂಡಂತೆ. ನರಮೇಧವನ್ನು ಕಂಡು ಜಗತ್ತು ಮೌನ ವಹಿಸಿದಂತೆ ನಾವು ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಪ್ರಯಾಣದ ಆರಂಭಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಗ್ರೆಟಾ ಹೇಳಿದ್ದಾರೆ.
ರವಿವಾರ ದಕ್ಷಿಣ ಇಟಲಿಯ ಕ್ಯಾಟಾನಿಯಾ ಬಂದರಿನಿಂದ ಈ ಹಡಗು ಗಾಝಾದ ಕಡೆಗೆ ಹೊರಟಿತ್ತು. ಗ್ರೆಟಾ ಅವರ ಜೊತೆಗೆ ‘ಗೇಮ್ ಆಫ್ ಥ್ರೋನ್ಸ್’ ನಟ ಲಿಯಾಮ್ ಕನ್ನಿಂಗ್ಹ್ಯಾಮ್ ಮತ್ತು ಯುರೋಪಿಯನ್ ಪಾರ್ಲಿಮೆಂಟ್ ನ ಫ್ರೆಂಚ್ ಸದಸ್ಯೆ ರಿಮಾ ಹಸನ್ ಅವರೂ ಇದ್ದಾರೆ.