ಗಾಝಾ: ಇಸ್ರೇಲ್ ದಾಳಿಯಲ್ಲಿ 54 ಮಂದಿ ಮೃತ್ಯು
Update: 2025-05-15 22:12 IST
ಸಾಂದರ್ಭಿಕ ಚಿತ್ರ | PC : NDTV
ಗಾಝಾ: ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ಬುಧವಾರ ರಾತ್ರಿಯಿಂದ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 54 ಮಂದಿ ಮೃತಪಟ್ಟಿರುವುದಾಗಿ ನಾಸೆರ್ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ಗುರುವಾರ ವರದಿ ಮಾಡಿದೆ.
ಬುಧವಾರ ರಾತ್ರಿಯಿಂದ ಕನಿಷ್ಠ 10 ವೈಮಾನಿಕ ದಾಳಿಗಳು ಖಾನ್ ಯೂನಿಸ್ ನಗರವನ್ನು ನಡುಗಿಸಿದ್ದು ಹಲವು ದೇಹಗಳು ಛಿದ್ರಛಿದ್ರವಾಗಿವೆ. 54 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು ನೆಲಸಮಗೊಂಡ ಕಟ್ಟಡಗಳ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೆ ಉತ್ತರ ಮತ್ತು ದಕ್ಷಿಣ ಗಾಝಾದಲ್ಲಿ ನಡೆದಿದ್ದ ವೈಮಾನಿಕ ದಾಳಿಯಲ್ಲಿ 22 ಮಕ್ಕಳ ಸಹಿತ ಕನಿಷ್ಠ 70 ಮಂದಿ ಮೃತಪಟ್ಟಿದ್ದರು.