×
Ad

ನಿಜ್ಜಾರ್ ಹತ್ಯೆಯ ತನಿಖೆಗೆ ಸಹಕರಿಸಲು ಭಾರತವನ್ನು ಕೋರಿದ್ದೇವೆ: ಅಮೆರಿಕ

Update: 2023-09-26 22:38 IST

Photo: X/StateDeptSpox

ವಾಷಿಂಗ್ಟನ್ : ಖಾಲಿಸ್ತಾನಿ ಉಗ್ರಗಾಮಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಕೆನಡಾದ ತನಿಖೆ ಮುಂದುವರಿಯಬೇಕು ಮತ್ತು ಅಪರಾಧಿಗಳನ್ನು ನ್ಯಾಯಾಂಗಕ್ಕೆ ತರುವುದು ಅತ್ಯಗತ್ಯವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೆನಡಿಯನ್ ಪ್ರಧಾನಿ ಜಸ್ಟಿನ್ ಟ್ರೂಡೊ ಉಲ್ಲೇಖಿಸಿರುವ ಆರೋಪಗಳಿಂದ ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ. ನಾವು ನಮ್ಮ ಕೆನಡಾದ ಪಾಲುದಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಕೆನಡಾದ ತನಿಖೆ ಮುಂದುವರಿಯುವುದು ಅತ್ಯಂತ ಮುಖ್ಯವಾಗಿದೆ ಮತ್ತು ಈ ತನಿಖೆಯಲ್ಲಿ ಸಹಕರಿಸುವಂತೆ ಭಾರತವನ್ನು ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಆಗ್ರಹಿಸಿದ್ದೇವೆ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News