×
Ad

ಭಾರತೀಯ ಪಿಎಚ್‍ಡಿ ವಿದ್ಯಾರ್ಥಿನಿ ಪ್ರಿಯಾ ಸಕ್ಸೇನಾಗೆ ಗಡೀಪಾರಿನಿಂದ ರಕ್ಷಣೆ ನೀಡಿದ ಅಮೆರಿಕ ನ್ಯಾಯಾಲಯ

Update: 2025-05-17 23:24 IST

PC : X \ @Geopoliticalkid 

ವಾಷಿಂಗ್ಟನ್: ಸೌತ್ ಡಕೋಟಾ ವಿವಿಯಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿ ಪ್ರಿಯಾ ಸಕ್ಸೇನಾರನ್ನು ಗಡೀಪಾರು ಮಾಡುವ ಟ್ರಂಪ್ ಆಡಳಿತದ ಪ್ರಯತ್ನಕ್ಕೆ ಫೆಡರಲ್ ನ್ಯಾಯಾಧೀಶರು ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.

ಈ ತಡೆಯಾಜ್ಞೆಯು ಅವರಿಗೆ ಪದವಿ ಪಡೆದ ಬಳಿಕವೂ ಅಮೆರಿಕದಲ್ಲಿ ಉಳಿಯಲು ಅವಕಾಶ ಮಾಡಿಕೊಡುತ್ತದೆ. ಎಪ್ರಿಲ್‍ನಲ್ಲಿ ಪ್ರಿಯಾ ಅವರ ವಿದ್ಯಾರ್ಥಿ ವೀಸಾವನ್ನು ರದ್ದುಪಡಿಸಲಾಗಿತ್ತು. ಇದರಿಂದ ಅವರಿಗೆ ಪದವಿ ಪಡೆಯಲು ತಡೆಯಾಗಿತ್ತು. ಪ್ರಿಯಾ ಅವರು ಕ್ರಿಮಿನಲ್ ದಾಖಲೆ ಹೊಂದಿದ್ದಾರೆ ಎಂಬ ಕಾರಣ ನೀಡಿ ವೀಸಾ ರದ್ದುಪಡಿಸಲಾಗಿತ್ತು. ಆದರೆ ಸಣ್ಣ ಮಟ್ಟಿನ ಟ್ರಾಫಿಕ್ ನಿಯಮ ಉಲ್ಲಂಘನೆಯು (ತುರ್ತು ಸೇವಾ ವಾಹನ ಮುಂದೆ ಸಾಗಲು ತನ್ನ ವಾಹನ ನಿಲ್ಲಿಸದ) ಗಡೀಪಾರಿಗೆ ಕಾರಣವಾಗುವ ಅಪರಾಧವಲ್ಲ ಎಂದು ಅವರ ವಕೀಲರು ವಾದ ಮಂಡಿಸಿದ್ದರು.

ಇದನ್ನು ಪುರಸ್ಕರಿಸಿದ ನ್ಯಾಯಾಲಯ ಗಡೀಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News