ಕೆನಡಾ : ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Photo |NDTV
ಒಟ್ಟಾವಾ : ಕೆನಡಾದಲ್ಲಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.
ವಂಶಿಕಾ ಮೃತ ವಿದ್ಯಾರ್ಥಿನಿ. ಪಂಜಾಬ್‌ನ ಡೇರಾ ಬಸ್ಸಿ ಮೂಲದ ವಂಶಿಕಾ ಆಪ್ ನಾಯಕ ದೇವಿಂದರ್ ಸಿಂಗ್ ಅವರ ಪುತ್ರಿ. ಅವರು ಎರಡು ವರ್ಷಗಳ ಮೊದಲು ಡಿಪ್ಲೊಮಾ ವಿದ್ಯಾಭ್ಯಾಸಕ್ಕೆಂದು ಒಟ್ಟಾವಾಗೆ ತೆರಳಿದ್ದರು.
ʼಒಟ್ಟಾವಾದಲ್ಲಿ ಭಾರತೀಯ ವಿದ್ಯಾರ್ಥಿನಿ ವಂಶಿಕಾ ಅವರ ಸಾವಿನ ಬಗ್ಗೆ ತಿಳಿಸಲು ನಾವು ತೀವ್ರ ದುಃಖಿತರಾಗಿದ್ದೇವೆ. ಸ್ಥಳೀಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಕುಟುಂಬದ ಜೊತೆ ನಾವು ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತೇವೆʼ ಎಂದು ಒಟ್ಟಾವಾದಲ್ಲಿರುವ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.
ವಂಶಿಕಾ ಅವರು ಎಪ್ರಿಲ್ 25ರಂದು ನಾಪತ್ತೆಯಾಗಿದ್ದರು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬಸ್ಥರು ಆತಂಕಗೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ವಂಶಿಕಾ ಅವರ ಮೃತದೇಹ ಒಟ್ಟಾವದ ಬೀಚ್‌ನಲ್ಲಿ ಪತ್ತೆಯಾಗಿದೆ.