30 ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿದ ಇರಾನ್: ವರದಿ
Update: 2026-06-08 22:22 IST
ಸಾಂದರ್ಭಿಕ ಚಿತ್ರ | Photo Credit : gemini AI
ಟೆಲ್ ಅವೀವ್, ಜೂ. 8: ರವಿವಾರ ತಡರಾತ್ರಿಯಿಂದ ಇಸ್ರೇಲ್ ನತ್ತ ಇರಾನ್ ಸುಮಾರು 30 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು, ಹೌದಿಗಳು ಎರಡು ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಬಹುತೇಕ ಕ್ಷಿಪಣಿಗಳನ್ನು ಪ್ರತಿಬಂಧಿಸಲಾಗಿದೆ. ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಇಸ್ರೇಲ್ ನ ಮಿಲಿಟರಿ ಅಧಿಕಾರಿ ಹೇಳಿದ್ದಾರೆ.
ಇಸ್ರೇಲ್ ನ ಪ್ರತಿದಾಳಿಯಲ್ಲಿ ಇರಾನ್‌ನ ಮಹಶಹರ್ ಪೆಟ್ರೋಕೆಮಿಕಲ್ಸ್ ಸ್ಥಾವರದ ಒಂದು ಭಾಗಕ್ಕೆ ಹಾನಿಯಾಗಿದೆ. ಮಹಶಹರ್ ನಗರದಲ್ಲಿ 14 ಮಂದಿ ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ರಾಷ್ಟ್ರೀಯ ತುರ್ತು ಸೇವಾ ಸಂಸ್ಥೆ ಹೇಳಿದೆ. ಈ ಮಧ್ಯೆ, ಇರಾನ್ ವಿರುದ್ಧದ ಕ್ಷಿಪಣಿ ದಾಳಿಯನ್ನು ಸ್ಥಗಿತಗೊಳಿಸಿರುವುದಾಗಿ ಇಸ್ರೇಲ್ ಘೋಷಿಸಿದೆ ಎಂದು ವರದಿಯಾಗಿದೆ.