ಭಾರತದ ಮೇಲೆ ನಿರಂತರ ನಿಗಾ ಇಡಲು ಪಾಕ್ ನಿಂದ 6 ಉಪಗ್ರಹ ಉಡಾವಣೆ: ವರದಿ
ಸಾಂದರ್ಭಿಕ ಚಿತ್ರ | AI
ಲಂಡನ್, ಜೂ. 8: ಪಾಕಿಸ್ತಾನವು ಕಳೆದ 16 ತಿಂಗಳುಗಳಲ್ಲಿ ತನ್ನ ಭೂ-ವೀಕ್ಷಣಾ ಉಪಗ್ರಹ ಜಾಲವನ್ನು ಗಮನಾರ್ಹವಾಗಿ ವಿಸ್ತರಿಸಿದ್ದು, 2025ರ ಜನವರಿಯಿಂದ 2026ರ ಜೂನ್ ನಡುವೆ 6 ಉಪಗ್ರಹಗಳನ್ನು ಉಡಾವಣೆ ಮಾಡಿರುವುದಾಗಿ ‘the print’ ವರದಿ ಮಾಡಿದೆ.
ವರದಿಯ ಪ್ರಕಾರ, ಹೊಸದಾಗಿ ಉಡಾವಣೆಯಾದ ಹೆಚ್ಚಿನ ಉಪಗ್ರಹಗಳನ್ನು ಭಾರತದ ಭೂಪ್ರದೇಶಗಳನ್ನು, ವಿಶೇಷವಾಗಿ ಉತ್ತರ ಭಾರತ ಮತ್ತು ಜಮ್ಮು–ಕಾಶ್ಮೀರ ಪ್ರದೇಶವನ್ನು ಚಿತ್ರಿಸಲು ಅನುವು ಮಾಡಿಕೊಡುವಂತೆ ಕಕ್ಷೆಯಲ್ಲಿ ನೆಲೆಗೊಳಿಸಲಾಗಿದೆ.
ಆಪರೇಷನ್ ಸಿಂಧೂರ್ ಬಳಿಕ ಭಾರತ ಮತ್ತು ಪಾಕಿಸ್ತಾನ ಯುದ್ಧವಿರಾಮಕ್ಕೆ ಒಪ್ಪಿದ ನಂತರ ಉಪಗ್ರಹ ಉಡಾವಣೆ ಇನ್ನಷ್ಟು ವೇಗ ಪಡೆದಿದೆ. ನೆಲದ ಮೇಲಿನ ಭದ್ರತಾ ಪರಿಸ್ಥಿತಿಯು ತುಲನಾತ್ಮಕವಾಗಿ ಸ್ಥಿರವಾಗಿರುವಂತೆಯೇ, ಪಾಕಿಸ್ತಾನವು ಚೀನಾದ ಉಪಗ್ರಹ ಅಭಿವೃದ್ಧಿ ಹಾಗೂ ಉಡಾವಣಾ ಸೇವೆಗಳ ಬೆಂಬಲದೊಂದಿಗೆ ತನ್ನ ಬಾಹ್ಯಾಕಾಶ ಆಧಾರಿತ ಕಣ್ಗಾವಲು ಸಾಮರ್ಥ್ಯಗಳನ್ನು ಸದ್ದಿಲ್ಲದೆ ಬಲಪಡಿಸಿದೆ ಎಂದು ವರದಿ ಹೇಳಿದೆ.