×
Ad

ಇರಾನ್‌ ಗೆ ತೆರಳುತ್ತಿದ್ದ ತೈಲ ಟ್ಯಾಂಕರ್ ಮೇಲೆ ಅಮೆರಿಕದ ಯುದ್ಧ ವಿಮಾನಗಳಿಂದ ದಾಳಿ

Update: 2026-06-08 23:34 IST

ಸಾಂದರ್ಭಿಕ ಚಿತ್ರ | Photo Credit : PTI

ವಾಷಿಂಗ್ಟನ್, ಜೂ. 8: ಇರಾನ್ ಕಡೆಗೆ ಸಾಗುತ್ತಿದ್ದ ಪಲಾವ್ ಧ್ವಜ ಹೊತ್ತ ತೈಲ ಟ್ಯಾಂಕರ್‌ ವೊಂದರ ಮೇಲೆ ಅಮೆರಿಕದ ಮಿಲಿಟರಿ ಒಮಾನ್ ಕೊಲ್ಲಿಯಲ್ಲಿ ದಾಳಿ ನಡೆಸಿ ನಿಷ್ಕ್ರಿಯಗೊಳಿಸಿವೆ ಎಂದು ಅಮೆರಿಕ ಕೇಂದ್ರ ಕಮಾಂಡ್ (CENTCOM) ತಿಳಿಸಿದೆ.

CENTCOM ಪ್ರಕಾರ, ಖಾಲಿಯಾಗಿದ್ದ 'ಮಾರಿವೆಕ್ಸ್' ಹಡಗು ಇರಾನ್‌ ಗೆ ತೆರಳುತ್ತಿದ್ದ ವೇಳೆ ಈ ಕ್ರಮ ಕೈಗೊಳ್ಳಲಾಗಿದೆ. ಹಡಗಿನ ಸಿಬ್ಬಂದಿ ಅಮೆರಿಕ ಸೇನೆ ನೀಡಿದ್ದ ನಿರ್ದೇಶನಗಳನ್ನು ಪಾಲಿಸಲು ವಿಫಲರಾದ ಬಳಿಕ ಅಮೆರಿಕದ ಯುದ್ಧ ವಿಮಾನವು ಹಡಗಿನ ಇಂಜಿನಿಯರಿಂಗ್ ಹಾಗೂ ಸ್ಟೀರಿಂಗ್ ವಿಭಾಗಗಳನ್ನು ಗುರಿಯಾಗಿಸಿಕೊಂಡು ನಿಖರ ಕ್ಷಿಪಣಿ ದಾಳಿ ನಡೆಸಿದೆ ಎಂದು ಹೇಳಿದೆ.

‘ಮಾರಿವೆಕ್ಸ್ ಇನ್ನು ಮುಂದೆ ಇರಾನ್‌ ಗೆ ಪ್ರಯಾಣಿಸುತ್ತಿಲ್ಲ’ ಎಂದು CENTCOM ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.

ಈ ದಾಳಿಯು ಇರಾನ್ ವಿರುದ್ಧ ವಾಷಿಂಗ್ಟನ್ ಜಾರಿಗೊಳಿಸಿರುವ ನೌಕಾ ದಿಗ್ಬಂಧನದ ಉಲ್ಬಣವನ್ನು ಸೂಚಿಸುತ್ತದೆ. ಅಮೆರಿಕದ ಆದೇಶಗಳನ್ನು ಪಾಲಿಸದ ಹಡಗುಗಳ ವಿರುದ್ಧ ಅಮೆರಿಕದ ಪಡೆಗಳು ನೇರ ದಾಳಿ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ವಿಶ್ಲೇಷಿಸಲಾಗಿದೆ ಎಂದು Aljazeera ವರದಿ ಮಾಡಿದೆ.

ಎಪ್ರಿಲ್ 13ರಂದು ದಿಗ್ಬಂಧನ ಆರಂಭವಾದ ಬಳಿಕ CENTCOM ಪಡೆಗಳು ಆದೇಶ ಪಾಲಿಸದ ಏಳು ಹಡಗುಗಳ ಮೇಲೆ ದಾಳಿ ನಡೆಸಿದೆ. ಅಲ್ಲದೆ, 134 ಹಡಗುಗಳನ್ನು ಬೇರೆ ಮಾರ್ಗಗಳ ಮೂಲಕ ಕಳುಹಿಸಲಾಗಿದೆ, ಮಾನವೀಯ ನೆರವು ಸಾಗಿಸುತ್ತಿದ್ದ 42 ಹಡಗುಗಳಿಗೆ ಹಾದು ಹೋಗಲು ಅನುಮತಿ ನೀಡಲಾಗಿದೆ ಎಂದು CENTCOM ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News