×
Ad

ಯುದ್ಧ, ಮಾತುಕತೆ ಎರಡಕ್ಕೂ ಸಿದ್ಧ: ಇರಾನ್ ಅಧ್ಯಕ್ಷ ಪೆಝೆಶ್ಕಿಯಾನ್

Update: 2026-06-08 22:15 IST

ಮಸೂದ್ ಪೆಝೆಶ್ಕಿಯಾನ್ | Photo Credit : aljazeera.com

ಟೆಹರಾನ್, ಜೂ. 8: ಇಸ್ರೇಲ್ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಿದ ಬಳಿಕ ಇರಾನ್ ಮಾತುಕತೆಯನ್ನು ಮುಂದುವರಿಸಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಸೋಮವಾರ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತೆ ಮತ್ತು ನಮ್ಮ ಜನರ ಶಾಂತಿಗೆ ನಾವು ಮೊದಲ ಆದ್ಯತೆ ನೀಡುತ್ತೇವೆ. ನಾವು ನಮ್ಮ ದೇಶದ ಹಕ್ಕುಗಳನ್ನು ಸಮರ್ಥವಾಗಿ ರಕ್ಷಿಸಿಕೊಳ್ಳುತ್ತೇವೆ ಮತ್ತು ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ. ರಾಜತಾಂತ್ರಿಕತೆ ಮತ್ತು ರಕ್ಷಣೆ ರಾಷ್ಟ್ರೀಯ ಶಕ್ತಿಯ ಎರಡು ರೆಕ್ಕೆಗಳು. ನಾವು ಯುದ್ಧರಂಗವನ್ನೂ ತ್ಯಜಿಸಿಲ್ಲ, ಮಾತುಕತೆಯ ಪ್ರಕ್ರಿಯೆಯನ್ನೂ ತ್ಯಜಿಸಿಲ್ಲ. ದೇವರ ಇಚ್ಛೆ ಮತ್ತು ಏಕತೆ ಹಾಗೂ ವೈಚಾರಿಕತೆಯೊಂದಿಗೆ ಇರಾನ್ ಈ ಬಾರಿಯೂ ವಿಜಯಶಾಲಿಯಾಗಿ ಹೊರಹೊಮ್ಮಲಿದೆ' ಎಂದು ಪೆಝೆಶ್ಕಿಯಾನ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News