ಇರಾನ್ ಪೂರ್ಣಪ್ರಮಾಣದ ಯುದ್ಧದಲ್ಲಿದೆ : ಮಸೂದ್ ಪೆಝೆಶ್ಕಿಯಾನ್
ಮಸೂದ್ ಪೆಝೆಶ್ಕಿಯಾನ್ | Photo Credit : aljazeera.com
ಟೆಹರಾನ್, ಜು.20: ಇರಾನ್ ದೇಶವು ಅಮೆರಿಕದೊಂದಿಗೆ ಪೂರ್ಣಪ್ರಮಾಣದ ಯುದ್ಧದಲ್ಲಿ ತೊಡಗಿಸಿಕೊಂಡಿದೆ ಮತ್ತು ಈ ಸಂಘರ್ಷದ ಪರಿಣಾಮಗಳನ್ನು ಇರಾನ್ ಒಪ್ಪಿಕೊಳ್ಳಲೇಬೇಕು ಎಂದು ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ.
ನಾವು ವಾಸ್ತವಿಕವಾಗಿರಬೇಕು ಮತ್ತು ಈ ಪ್ರತಿರೋಧದ ಸಹಜ ಪರಿಣಾಮಗಳನ್ನು ಸ್ವೀಕರಿಸಬೇಕು. ಪ್ರಸ್ತುತ ಸಂಘರ್ಷವು ಕೇವಲ ಕ್ಷಿಪಣಿ ದಾಳಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇರಾನ್ ತನ್ನ ರಾಷ್ಟ್ರೀಯ ಹಕ್ಕುಗಳು ಅಥವಾ ಹಿತಾಸಕ್ತಿಗಳ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕೇವಲ ಮಿಲಿಟರಿ ಕ್ರಮಗಳ ಮೂಲಕ ಇರಾನ್ ಜನರನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ದೇಶದ ವಿರೋಧಿಗಳು ಅರ್ಥಮಾಡಿಕೊಂಡಿದ್ದಾರೆ' ಎಂದು ಮಸೂದ್ ಪೆಝೆಶ್ಕಿಯಾನ್ ಹೇಳಿದ್ದಾರೆ.
ಈಗ ಎಂದಿಗಿಂತಲೂ ಹೆಚ್ಚಾಗಿ ಏಕತೆ, ಒಗ್ಗಟ್ಟು ಮತ್ತು ಸಾಮೂಹಿಕ ವಿವೇಕದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ. ನಾವು ತಿಳುವಳಿಕಾ ಪತ್ರದಲ್ಲಿ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ. ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ ಇರಾನ್ ತನ್ನ ಯಾವುದೇ ಹಕ್ಕುಗಳು, ಹಿತಾಸಕ್ತಿಗಳು ಅಥವಾ ತತ್ವಗಳಿಂದ ಹಿಂದೆ ಸರಿದಿಲ್ಲ ಎಂದು ಪೆಝೆಶ್ಕಿಯಾನ್ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.