×
Ad

Iran | ಮಶಾದ್‌ ನಲ್ಲಿರುವ ಇಮಾಮ್ ಮಸೀದಿ ಬಳಿ ಆಯತುಲ್ಲಾ ಖಾಮಿನೈ ಅಂತ್ಯಸಂಸ್ಕಾರಕ್ಕೆ ಸಿದ್ಧತೆ

Update: 2026-06-03 22:52 IST

ಆಯತುಲ್ಲಾ ಅಲಿ ಖಾಮಿನೈ (Photo: PTI)

ಟೆಹರಾನ್, ಜೂ. 3: ಇರಾನ್‌ ನ ಹತ್ಯೆಗೀಡಾದ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಅವರ ಅಂತ್ಯಕ್ರಿಯೆಯನ್ನು ಪವಿತ್ರ ನಗರವಾದ ಮಶಾದ್‌ನಲ್ಲಿರುವ ಇಮಾಮ್ ಮಸೀದಿಯ ಬಳಿ ನಡೆಸಲಾಗುವುದು. ಶಿಯಾ ಇಸ್ಲಾಂನ ಅತ್ಯಂತ ಗಣ್ಯ ವ್ಯಕ್ತಿಗಳ ಪಕ್ಕದಲ್ಲಿ ಸಮಾಧಿ ಮಾಡಬೇಕೆಂಬ ಅವರ ಅಂತಿಮ ಆಶಯಕ್ಕೆ ಅನುಗುಣವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಇರಾನ್‌ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ತಿಳಿಸಿದೆ.

ಫೆಬ್ರುವರಿ 28ರಂದು ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ 86 ವರ್ಷದ ಖಾಮಿನೈ ಹತರಾಗಿದ್ದರು. ಅವರ ಅಂತ್ಯಸಂಸ್ಕಾರ ಜೂನ್ 21ರಂದು ನಡೆಯುವ ನಿರೀಕ್ಷೆಯಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗುವುದು.

ಅಂತ್ಯಕ್ರಿಯೆ ಸಮಾರಂಭಗಳು ಟೆಹರಾನ್, ಕೋಮ್ ಮತ್ತು ಮಶಾದ್ ನಗರಗಳಲ್ಲಿ ನಡೆಯಲಿದ್ದು, ಸಾರ್ವಜನಿಕ ವೀಕ್ಷಣೆ ಮತ್ತು ಅಂತಿಮ ಗೌರವ ಸಲ್ಲಿಸಲು ಮೂರು ದಿನಗಳನ್ನು ಘೋಷಿಸಲಾಗಿದೆ. ಮುಖ್ಯ ಅಂತ್ಯಕ್ರಿಯೆ ಸಮಾರಂಭ ಟೆಹರಾನ್‌ ನಲ್ಲಿ ನಡೆಯಲಿದ್ದು, ಬಳಿಕ ಕೋಮ್ ಮತ್ತು ಮಶಾದ್‌ ನಲ್ಲಿ ಮೆರವಣಿಗೆಗಳು ನಡೆಯಲಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News