ರಷ್ಯಾ ತೈಲ ನಿರ್ಬಂಧಗಳ ವಿನಾಯಿತಿ ಕೊನೆಗೊಳಿಸಲು ಅಮೆರಿಕ ಚಿಂತನೆ: ವರದಿ
Update: 2026-06-03 22:39 IST
ಸಾಂದರ್ಭಿಕ ಚಿತ್ರ | Photo Credit : magnific
ವಾಷಿಂಗ್ಟನ್, ಜೂ. 3: ರಷ್ಯಾದ ತೈಲ ನಿರ್ಬಂಧಗಳಿಗೆ ಸಂಬಂಧಿಸಿದ ವಿನಾಯಿತಿಯನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸುವ ಕುರಿತು ಅಮೆರಿಕ ಚಿಂತನೆ ನಡೆಸುತ್ತಿದ್ದು, ಇದು ಭಾರತದ ಕಚ್ಚಾತೈಲ ಆಮದು ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಮೆರಿಕ ಸಂಸತ್ತಿನ ವಿದೇಶಾಂಗ ನೀತಿ ಸಮಿತಿಯ ಎದುರು ಹೇಳಿಕೆ ನೀಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ‘ಇರಾನ್ ಯುದ್ಧದ ಸಮಯದಲ್ಲಿ ಜಾಗತಿಕ ಪೂರೈಕೆಯನ್ನು ಸರಾಗಗೊಳಿಸುವ ಕ್ರಮವಾಗಿ ತಾತ್ಕಾಲಿಕ ವಿನಾಯಿತಿ ನೀಡಲಾಗಿತ್ತು. ಅದನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಲು ನಾವು ಬಯಸುತ್ತೇವೆ. ಏಕೆಂದರೆ ರಷ್ಯಾದ ತೈಲದ ಮೇಲೆ ನಿರ್ಬಂಧ ಹೇರುವುದು ನಮ್ಮ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ’ ಎಂದು ಹೇಳಿದ್ದಾರೆ.