×
Ad

ಯುರೋಪ್ ದೇಶಗಳ ಜತೆ ಪರಮಾಣು ಮಾತುಕತೆ : ಇರಾನ್ ನಿರ್ಧಾರ

Update: 2024-11-24 21:47 IST

PC : ine.org.pl

ಟೆಹ್ರಾನ್ : ನವೆಂಬರ್ 29ರಂದು ಯುರೋಪ್‍ನ ಮೂರು ಬಲಿಷ್ಟ ದೇಶಗಳ ಜತೆಗೆ ಇರಾನ್ ತನ್ನ ವಿವಾದಾತ್ಮಕ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಲಿದೆ ಎಂದು ಇರಾನ್‍ನ ವಿದೇಶಾಂಗ ಇಲಾಖೆ ರವಿವಾರ ಹೇಳಿದೆ.

ಜಿನೆವಾದಲ್ಲಿ ನವೆಂಬರ್ 29ರಂದು ಜಿನೆವಾದಲ್ಲಿ ಮಾತುಕತೆ ನಡೆಯಲಿದೆ. ಪರಮಾಣು ಸಂಬಂಧಿತ ಬಿಕ್ಕಟ್ಟು ರಾಜತಾಂತ್ರಿಕತೆಯ ಮೂಲಕವೇ ಪರಿಹರಿಸಬೇಕು ಎಂದು ಇರಾನ್ ಯಾವಾಗಲೂ ನಂಬುತ್ತದೆ. ನಾವು ಮಾತುಕತೆಯಿಂದ ಹಿಂದೆ ಸರಿದಿಲ್ಲ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News