ಕೇನ್ಸ್ ಚಲನಚಿತ್ರೋತ್ಸವ: ಇರಾನ್ ನ ನಿರ್ದೇಶಕ ಜಾಫರ್ ಪನಾಹಿಗೆ ಅತ್ಯುನ್ನತ ಪ್ರಶಸ್ತಿ
Photo Credit: Natacha Pisarenko/Invision/AP
ಪ್ಯಾರಿಸ್: ಫ್ರಾನ್ಸ್ ನಲ್ಲಿ ಶನಿವಾರ ಮುಕ್ತಾಯಗೊಂಡ 78ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಇರಾನ್ ನ ನಿರ್ದೇಶಕ ಜಾಫರ್ ಪನಾಹಿ ಅವರ `ಇಟ್ ವಾಸ್ ಜಸ್ಟ್ ಆ್ಯನ್ ಆ್ಯಕ್ಸಿಡೆಂಟ್' ಸಿನೆಮಾ ಅತ್ಯುನ್ನತ `ಪಾಮ್ ಡಿ'ಓರ್' ಪ್ರಶಸ್ತಿ ಗೆದ್ದಿದೆ.
ಇದರೊಂದಿಗೆ ಯುರೋಪ್ ನ ಎಲ್ಲಾ ಮೂರು ಪ್ರಮುಖ ಚಲನಚಿತ್ರೋತ್ಸವದಲ್ಲಿ ಅತ್ಯುನ್ನತ ಪ್ರಶಸ್ತಿ ಗೆದ್ದ ಹಿರಿಮೆಗೆ 64 ವರ್ಷದ ಪನಾಹಿ ಪಾತ್ರರಾಗಿದ್ದಾರೆ. 2015ರಲ್ಲಿ `ಟ್ಯಾಕ್ಸಿ' ಸಿನೆಮಾಕ್ಕೆ ಬರ್ಲಿನ್ ನಲ್ಲಿ ಗೋಲ್ಡನ್ ಬೇರ್, 2000ನೇ ಇಸವಿಯಲ್ಲಿ ವೆನಿಸ್ ನಲ್ಲಿ `ದಿ ಸರ್ಕಲ್' ಸಿನೆಮಾಕ್ಕೆ ಗೋಲ್ಡನ್ ಲಯನ್ ಪುರಸ್ಕಾರವನ್ನು ಪನಾಹಿ ಪಡೆದಿದ್ದರು. ಅವರನ್ನು ಇರಾನ್ ಸರಕಾರ ಸಿನೆಮ ನಿರ್ಮಾಣದಿಂದ 15 ವರ್ಷ ನಿರ್ಬಂಧಿಸಿತ್ತು.
ಇತರ ಪ್ರಶಸ್ತಿಗಳ ವಿವರ:
ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ: ಸೆಂಟಿಮೆಂಟಲ್ ವ್ಯಾಲ್ಯೂ' ಸಿನೆಮಾಕ್ಕೆ ನಾರ್ವೆಯ ಜೋಕಿಂ ಟ್ರೈಯರ್.
ತೀರ್ಪುಗಾರರ ಪ್ರಶಸ್ತಿ: ಸೌಂಡ್ ಆಫ್ ಫಾಲಿಂಗ್' ಸಿನೆಮಾಕ್ಕೆ ಜರ್ಮನಿಯ ಮಾಷ್ಚಾ ಸಿಲಿಂಸ್ಕಿ ಮತ್ತು `ಸಿರಾತ್' ಸಿನೆಮಾಕ್ಕೆ ಫ್ರಾನ್ಸ್-ಸ್ಪೇನ್ ನಿರ್ದೇಶಕ ಒಲಿವರ್ ಲಾಕ್ಸೆ.
ಬ್ರೆಝಿಲ್‍ನ `ದಿ ಸೀಕ್ರೆಟ್ ಏಜೆಂಟ್' ಸಿನೆಮಾಕ್ಕೆ 2 ಪ್ರಶಸ್ತಿ, ವಾಗ್ನರ್ ಮೌರ- ಅತ್ಯುತ್ತಮ ನಟ. ಕ್ಲೆಬರ್ ಮೆಂಡೋನ್ಸಾ ಫಿಲ್ಹೊ -ಉತ್ತಮ ನಿರ್ದೇಶಕ.
ಅತ್ಯುತ್ತಮ ನಟಿ- `ದಿ ಲಿಟಲ್ ಸಿಸ್ಟರ್' ಸಿನೆಮದ ನಾಡಿಯಾ ಮೆಲ್ಲಿಟಿ- ಫ್ರಾನ್ಸ್.